Pages

04/12/16 ಪ್ರಾತಃ ಮುರುಳಿ ಓಂ ಶಾಂತಿ "ಅವ್ಯಕ್ತ-ಬಾಪ್'ದಾದಾ" ರಿವೈಸ್-15/12/93 ಮಧುಬನ

04/12/16 ಪ್ರಾತಃ ಮುರುಳಿ ಓಂ ಶಾಂತಿ "ಅವ್ಯಕ್ತ-ಬಾಪ್'ದಾದಾ" ರಿವೈಸ್-15/12/93 ಮಧುಬನ

"ಸಂಕಲ್ಪ ಶಕ್ತಿಯ ಮಹತ್ವಿಕೆಯನ್ನು ತಿಳಿದುಕೊಂಡು ಅದನ್ನು ವೃದ್ಧಿಪಡಿಸಿಕೊಳ್ಳಿರಿ ಮತ್ತು ಪ್ರಯೋಗದಲ್ಲಿ ತನ್ನಿರಿ"
ಇಂದು ಸರ್ವ ಶ್ರೇಷ್ಠ ತಂದೆಯು ತನ್ನ ನಾಲ್ಕೂ ಕಡೆಯಲ್ಲಿರುವ ಶ್ರೇಷ್ಠ ಮಕ್ಕಳನ್ನು ನೋಡುತ್ತಾ ಹರ್ಷಿತವಾಗುತ್ತಿದ್ದಾರೆ ಏಕೆಂದರೆ ಇಡೀ ವಿಶ್ವದ ಆತ್ಮರಲ್ಲಿ ತಾವು ಮಕ್ಕಳು ಶ್ರೇಷ್ಠ ಅರ್ಥಾತ್ ಹೈಯೆಸ್ಟ್ ಆಗಿದ್ದೀರಿ,ಪ್ರಪಂಚದವರು ಹೇಳುತ್ತಾರೆ ಹೈಯೆಸ್ಟ್ ಇನ್ ದಿ ವರ್ಲ್ಡ್ ಮತ್ತು ಅದೂ ಸಹ ಒಂದು ಜನ್ಮಕ್ಕಾಗಿ ಇರುವುದು.ಆದರೆ ತಾವು ಮಕ್ಕಳು ಹೈಯೆಸ್ಟ್ (ಶ್ರೇಷ್ಠ) ಇನ್ ದಿ ಕಲ್ಪ ಆಗಿದೆ. ಇಡೀ ಕಲ್ಪದಲ್ಲಿ ತಾವು ಶ್ರೇಷ್ಠವಾಗಿದ್ದಿರಿ. ಗೊತ್ತಿದೆಯಲ್ಲವೆ? ತಮ್ಮ ಅನಾದಿ ಕಾಲವನ್ನು ನೋಡಿರಿ,ಅನಾದಿ ಕಾಲದಲ್ಲಿಯೂ ಸಹ ತಾವೆಲ್ಲಾ ಆತ್ಮರು ತಂದೆಯ ಸಮೀಪದಲ್ಲಿರುವವರಾಗಿದ್ದೀರಿ,ಅನಾದಿ ರೂಪದಲ್ಲಿ ತಂದೆಯ ಜೊತೆ ಜೊತೆ ಸಮೀಪದಲ್ಲಿರುವ ಶ್ರೇಷ್ಠ ಆತ್ಮರಾಗಿದ್ದೇವೆ ಎಂದು ನೋಡುತ್ತಿದ್ದೀರಾ! ಇರುವುದಂತು ಎಲ್ಲರೂ ಇರುತ್ತಾರೆ ಆದರೆ ತಮ್ಮ ಸ್ಥಾನವು ಬಹಳ ಸಮೀಪದಲ್ಲಿರುತ್ತದೆ.ಅಂದಮೇಲೆ ಅನಾದಿ ರೂಪದಲ್ಲಿಯೂ ಸರ್ವ ಶ್ರೇಷ್ಠವಾಗಿದ್ದೀರಿ. ನಂತರ ಬನ್ನಿ ಆದಿ ಕಾಲದಲ್ಲಿ ಎಲ್ಲಾ ಮಕ್ಕಳು ದೇವ ಪದವಿಯವರು ದೇವತಾ ರೂಪದಲ್ಲಿದ್ದೀರಿ. ತಮ್ಮ ದೈವೀ ಸ್ವರೂಪವು ನೆನಪಿದೆಯೇ? ಆದಿ ಕಾಲದಲ್ಲಿ ಸರ್ವ ಪ್ರಾಪ್ತಿ ಸ್ವರೂಪದಲ್ಲಿದ್ದೀರಿ, ತನು-ಮನ-ಧನ ಮತ್ತು ಜನ ನಾಲ್ಕೂ ಸ್ವರೂಪದಲ್ಲಿಯೂ ಶ್ರೇಷ್ಠವಾಗಿದ್ದೀರಿ. ಸದಾ ಸಂಪನ್ನವಾಗಿದ್ದೀರಿ, ಸರ್ವ ಪ್ರಾಪ್ತಿ ಸ್ವರೂಪರಾಗಿದ್ದೀರಿ- ಇಂತಹ ದೇವ ಪದವಿಯು ಮತ್ತ್ಯಾವ ಆತ್ಮರಿಗೂ ಪ್ರಾಪ್ತಿಯಾಗುವುದಿಲ್ಲ,ಭಲೇ ಧರ್ಮಾತ್ಮರಾಗಿರಬಹುದು, ಮಹಾತ್ಮರಾಗಿರಬಹುದು ಆದರೆ ಇಂತಹ ಸರ್ವಪ್ರಾಪ್ತಿಗಳಲ್ಲಿ ಶ್ರೇಷ್ಠ. ಅಪ್ರಾಪ್ತಿಯ ಹೆಸರು-ಚಿಹ್ನೆಯೇ ಇಲ್ಲ ಎನ್ನುವ ಅನುಭವವನ್ನು ಯಾರೂ ಸಹ ಮಾಡಲು ಸಾಧ್ಯವಿಲ್ಲ, ನಂತರ ಬನ್ನಿರಿ ಮಧ್ಯಕಾಲದಲ್ಲಿ, ಮಧ್ಯಕಾಲದಲ್ಲಿಯೂ ಸಹ ತಾವು ಆತ್ಮರು ಪೂಜ್ಯರಾಗುತ್ತೀರಿ, ತಮ್ಮ ಜಡ ಚಿತ್ರದ ಪೂಜೆಯಾಗುತ್ತದೆ. ಹೇಗೆ ಪೂಜಾತ್ಮರ ಪೂಜೆಯು ವಿಧಿಪೂರ್ವಕವಾಗುತ್ತದೆ, ಹಾಗೆ ಯಾವುದೇ ಆತ್ಮರಿಗೂ ಇಂತಹ ವಿಧಿಪೂರ್ವಕವಾದ ಪೂಜೆಯಾಗುವುದಿಲ್ಲ.ಅಂದಮೇಲೆ ಯೋಚಿಸಿರಿ- ಈ ರೀತಿ ವಿಧಿಪೂರ್ವಕವಾಗಿ ಮತ್ತ್ಯಾರದಾದರೂ ಪೂಜೆಯಾಗುತ್ತದೆಯೇ! ಪ್ರತಿಯೊಂದು ಕರ್ಮದ ಪೂಜೆಯಾಗುತ್ತದೆ ಏಕೆಂದರೆ ಕರ್ಮಯೋಗಿಯಾಗುತ್ತೀರಿ, ಅಂದಮೇಲೆ ಪೂಜೆಯೂ ಸಹ ಪ್ರತಿಯೊಂದು ಕರ್ಮದ್ದಾಗುತ್ತದೆ. ಭಲೆ ಧರ್ಮಾತ್ಮರನ್ನು ಅಥವಾ ಮಹಾತ್ಮರನ್ನು ಜೊತೆಯಲ್ಲಿ ಮಂದಿರದಲ್ಲಿಯೂ ಇಡುತ್ತಾರೆ ಆದರೆ ವಿಧಿ ಪೂರ್ವಕ ಪೂಜೆಯಾಗುವುದಿಲ್ಲ, ಅಂದಮೇಲೆ ಮಧ್ಯಕಾಲದಲ್ಲಿಯೂ ಹೈಯೆಸ್ಟ್ ಅಂದರೆ ಶ್ರೇಷ್ಠರಾಗಿದ್ದೀರಿ. ನಂತರ ಬನ್ನಿರಿ- ವರ್ತಮಾನ ಅಂತ್ಯಕಾಲದಲ್ಲಿ, ಅಂತ್ಯಕಾಲದಲ್ಲಿಯೂ ಸಹ ಈಗ ಸಂಗಮದಲ್ಲಿ ಶ್ರೇಷ್ಠ ಆತ್ಮರಾಗಿದ್ದೀರಿ, ಯಾವ ಶ್ರೇಷ್ಠತೆಯಿದೆ? ಸ್ವಯಂ ಬಾಪ್'ದಾದಾ, ಪರಮಾತ್ಮ ಮತ್ತು ಆದಿ ಆತ್ಮ ಅರ್ಥಾತ್ ಬಾಪ್’ದಾದಾರವರಿಬ್ಬರ ಮೂಲಕ ಪಾಲನೆಯನ್ನೂ ತೆಗೆದುಕೊಳ್ಳುತ್ತೀರಿ, ವಿದ್ಯೆಯನ್ನೂ ಓದುತ್ತಿದ್ದೀರಿ, ಜೊತೆಯಲ್ಲಿ ಸದ್ಗುರುವಿನ ಮೂಲಕ ಶ್ರೀಮತವನ್ನು ತೆಗೆದುಕೊಳ್ಳುವ ಅಧಿಕಾರಿ ಆಗಿದ್ದೀರಿ. ಅಂದಮೇಲೆ ಅನಾದಿಕಾಲ, ಆದಿಕಾಲ, ಮಧ್ಯಕಾಲ ಮತ್ತು ಈಗ ಅಂತ್ಯದಲ್ಲಿಯೂ ಹೈಯೆಸ್ಟ್ ಆಗಿದ್ದೀರಿ, ಶ್ರೇಷ್ಠವಾಗಿದ್ದೀರಿ.ಇಷ್ಟು ನಶೆಯಿರುತ್ತದೆಯೇ? ಬಾಪ್’ದಾದಾರವರು ಹೇಳುತ್ತಾರೆ- ಈ ಸ್ಮೃತಿಯನ್ನು ಇಮರ್ಜ್ ಆಗಿಟ್ಟುಕೊಳ್ಳಿರಿ.ಮನಸ್ಸಿನಲ್ಲಿ, ಬುದ್ಧಿಯಲ್ಲಿ ಈ ಪ್ರಾಪ್ತಿಯನ್ನು ನೆನಪಿಸಿಕೊಳ್ಳಿರಿ. ಸ್ಮ್ರತಿಯನ್ನು ಎಷ್ಟು ಇಮರ್ಜ್ ಆಗಿಟ್ಟುಕೊಳ್ಳುತ್ತೀರಿ, ಅಷ್ಟು ಸ್ಮೃತಿಯಲ್ಲಿ ಆತ್ಮಿಕ ನಶೆಯಿರುತ್ತದೆ. ಖುಷಿಯಾಗುತ್ತದೆ, ಶಕ್ತಿಶಾಲಿಯಾಗುತ್ತೀರಿ. ಇಷ್ಟು ಹೈಯೆಸ್ಟ್ ಆತ್ಮವಾಗಿದ್ದೀರಿ. ನಾವೇ ಹೈಯಸ್ಟ್ ಶ್ರೇಷ್ಠವಾಗಿದ್ದೆವು, ಆಗಿದ್ದೇವೆ ಮತ್ತು ಸದಾ ಆಗುತ್ತಿರುತ್ತೇವೆ- ಈ ನಿಶ್ಚಯವು ಪರಿಪಕ್ವವಾಗಿದೆಯೇ? ನಶೆಯಿದೆಯೇ? ಪರಿಪಕ್ವವಾದ ನಶೆಯಿದೆಯೆಂದರೆ ಕೈಯೆತ್ತಿರಿ.ಟೀಚರ್ಸ್ ಸಹ ಕೈಯೆತ್ತಿರಿ.

ಮಾತೆಯರಂತು ಸದಾ ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಾರೆ,ತೂಗುತ್ತಿರುತ್ತೀರಲ್ಲವೆ! ಮಾತೆಯರಿಗೆ ಬಹಳ ನಶೆಯಿರುತ್ತದೆ, ಯಾವ ನಶೆಯಿರುತ್ತದೆ? ನಮಗಾಗಿ ತಂದೆಯು ಬಂದಿದ್ದಾರೆ, ನಶೆಯಿದೆಯಲ್ಲವೆ! ದ್ವಾಪರದಿಂದ ಎಲ್ಲರೂ ಕೆಳಗೆ ಬೀಸಿದರು.ಆದ್ದರಿಂದ ತಂದೆಗೆ ಮಾತೆಯರ ಪ್ರತಿ ಬಹಳ ಪ್ರೀತಿಯಿದೆ ಮತ್ತು ವಿಶೇಷವಾಗಿ ಮಾತೆಯರಿಗಾಗಿಯೇ ತಂದೆಯು ಬಂದಿದ್ದಾರೆ. ಖುಷಿಯಾಗುತ್ತಿದ್ದಾರೆ ಆದರೆ ಸದಾ ಖುಷಿಯಾಗಿ ಇರಬೇಕು, ಕೆಲವೊಮ್ಮೆಯ ನಶೆಯಲ್ಲ, ಸದಾಕಾಲದ ನಶೆಯು ಸದಾಕಾಲವೂ ಖುಷಿಯನ್ನು ಕೊಡುತ್ತದೆ. ತಾವು ಮಾತೆಯರ ಚಹರೆಯು ಸದಾ ಈ ರೀತಿಯಾಗಬೇಕು, ಅದು ದೂರದಿಂದ ಆತ್ಮಿಕ ಗುಲಾಬಿಯು ಕಾಣಿಸಬೇಕು ಏಕೆಂದರೆ ಈ ವಿಶ್ವವಿದ್ಯಾಲಯದ ಯಾವ ಮಾತು ಎಲ್ಲರಿಗೂ ಇಷ್ಟವಾಗುತ್ತದೆ, ವಿಶೇಷತೆಯು ಕಾಣಿಸುತ್ತದೆ, ಅದು ಇದೇ ಆಗಿದೆ- ಮಾತೆಯರು ಆತ್ಮಿಕ ಗುಲಾಬಿಯ ಸಮಾನ ಸದಾ ಅರಳಿರುವ ಹೂವಾಗಿರುವುದು ಮತ್ತು ಮಾತೆಯರೇ ಜವಾಬ್ದಾರಿಯನ್ನು ತೆಗೆದುಕೊಂಡು, ಮಾತೆಯರೇ ಇಷ್ಟು ದೊಡ್ಡ ಕಾರ್ಯವನ್ನು ಮಾಡುತ್ತಿದ್ದಾರೆ. ಭಲೆ ಮಹಾಮಂಡಲೇಶ್ವರರೂ ಇದ್ದಾರೆ ಆದರೆ ಅವರೂ ಸಹ ತಿಳಿಯುತ್ತಾರೆ-ಮಾತೆಯರು ನಿಮಿತ್ತರಾಗಿದ್ದಾರೆ ಮತ್ತು ಇಂತಹ ಶ್ರೇಷ್ಠ ಕಾರ್ಯವನ್ನು ಸಹಜವಾಗಿ ನಡೆಸುತ್ತಿದ್ದಾರೆ. ಮಾತೆಯರಿಗಾಗಿ ಹೇಳಿಕೆಯಿದೆ- ಸತ್ಯವೇ ಇಲ್ಲ, ಆದರೆ ಹೇಳಿಕೆಯಿದೆಯೆಂದಾಗ ಇಬ್ಬರು ಮಾತೆಯರು ಒಟ್ಟಿಗೆ ಸೇರಿ ಯಾವುದೇ ಕಾರ್ಯವನ್ನು ಮಾಡುತ್ತಾರೆ ಎನ್ನುವುದು ಬಹಳ ಕಷ್ಟವಾಗಿದೆ. ಆದರೆ ಇಲ್ಲಿ ಯಾರು ನಿಮಿತ್ತವಾಗಿದ್ದಾರೆ? ಮಾತೆಯರೇ ಅಲ್ಲವೆ! ಯಾವಾಗ ಮಿಲನವಾಗುವುದಕ್ಕೆ ಬರುತ್ತಾರೆ, ಆಗ ಏನು ಕೇಳಲಾಗುತ್ತದೆ? ಮಾತೆಯರು ನಡೆಸುತ್ತಾರೆ, ಪರಸ್ಪರರಲ್ಲಿ ಜಗಳವಾಡುವುದಿಲ್ಲವೇ? ಕಿರಿಕಿರಿ ಮಾಡುವುದಿಲ್ಲವೇ? ಆದರೆ ಅವರಿಗೇನು ಗೊತ್ತಿದೆ- ಇವರು ಸಾಧಾರಣ ಮಾತೆಯರಲ್ಲ,ಇವರು ಪರಮಾತ್ಮನ ಮೂಲಕ ನಿಮಿತ್ತವಾಗಿರುವ ಆತ್ಮರು, ಮಾತೆಯರಾಗಿದ್ದಾರೆ. ಪರಮಾತ್ಮನ ವರದಾನವು ಇವರನ್ನು ನಡೆಸುತ್ತಿದೆ. ಮಾತೆಯರಿಗಂತು ಮಾನ್ಯತೆಯಿದೆ. ನಮಗಿಲ್ಲವೇನು ಎಂದು ಸಹೋದರರು(ಪಾಂಡವರು) ತಿಳಿಯುವುದಿಲ್ಲವೇ, ತಮ್ಮದೂ ಗಾಯನವಿದೆ-5 ಪಾಂಡವರ ಗಾಯನವಿದೆ ಶಕ್ತಿಯರ ಜೊತೆ, 7 ಶೀತಲೆಯರನ್ನು ತೋರಿಸುತ್ತಾರೆ ಅಂದಮೇಲೆ ಒಬ್ಬ ಪಾಂಡವನನ್ನೂ ತೋರಿಸುತ್ತಾರೆ ಮತ್ತು ಪಾಂಡವರಿಲ್ಲದೆ ಮಾತೆಯರು ನಡೆಸಲು ಸಾಧ್ಯವಿಲ್ಲ,ಮಾತೆಯರಿಲ್ಲದೆ ಪಾಂಡವರು ನಡೆಸಲು ಸಾಧ್ಯವಿಲ್ಲ,ಎರಡು ಭುಜಗಳಿರಬೇಕು ಆದರೆ ಮಾತೆಯರನ್ನು ಬಹಳ ಬೀಳಿಸಿ ಬಿಟ್ಟಿದ್ದರಲ್ಲವೆ.ಆದ್ದರಿಂದ ಮಾತೆಯರನ್ನು ಪ್ರಪಂಚವೇ ಅಸಂಭವವೆಂದು ತಿಳಿಯುತ್ತಿದೆ,ಅವರಿಂದ ತಂದೆಯು ಸಂಭವ ಮಾಡಿ ತೋರಿಸುತ್ತಿದ್ದಾರೆ.ತಾವು ಮಾತೆಯರನ್ನು ನೋಡಿ ಖುಷಿಯಾಗಿದ್ದೀರಲ್ಲವೇ? ಅಥವಾ ಇಲ್ಲವೇ? ಖುಷಿಯಿದೆಯಲ್ಲವೇ! ಒಂದುವೇಳೆ ಮಾತೆಯರನ್ನು ನಿಮಿತ್ತರನ್ನಾಗಿ ಮಾಡಿಲ್ಲವೆಂದರೆ ಹೊಸ ಜ್ಞಾನ, ಹೊಸ ಸಿಸ್ಟಮ್ ಇರುವ ಕಾರಣದಿಂದ ಪಾಂಡವರನ್ನು ನೋಡಿ ಬಹಳ ಗಲಾಟೆಯಾಗುತ್ತದೆ. ಮಾತೆಯರು ಇದಕ್ಕೆ ಆಧಾರವಾಗಿದ್ದಾರೆ ಏಕೆಂದರೆ ಹೊಸ ಜ್ಞಾನವಲ್ಲವೆ, ಹೊಸ ಮಾತು ಆಗಿದೆ. ಆದರೆ ಸಹೋದರಿಯರ ಜೊತೆಯಲ್ಲಿ ಸಹೋದರರು ಸದಾ ಜೊತೆಯಿದ್ದಾರೆ. ಪಾಂಡವರು ತನ್ನ ಕಾರ್ಯದಲ್ಲಿ ಮುಂದಿದ್ದಾರೆ ಮತ್ತು ಸಹೋದರಿಯರು ತಮ್ಮ ಕಾರ್ಯದಲ್ಲಿ ಮುಂದೆ ಇದ್ದಾರೆ.ಇಬ್ಬರ ಸಲಹೆಯಿಂದ ಪ್ರತಿಯೊಂದು ಕಾರ್ಯವು ನಿರ್ವಿಘ್ನವಾಗಿ ನಡೆಯುತ್ತಿದೆ.ಬಾಪ್’ದಾದಾರವರು ಪ್ರತಿಯೊಂದು ದಿನದಲ್ಲಿ ಮಕ್ಕಳ ಭಿನ್ನ-ಭಿನ್ನವಾದ ಕಾರ್ಯವನ್ನು ನೋಡುತ್ತಿರುತ್ತಾರೆ,ಹೊಸ ಹೊಸ ಯೋಜನೆಗಳನ್ನು ಮಾಡುತ್ತಲೇ ಇರುತ್ತಾರೆ. ಸಮಯವಂತು ಎಲ್ಲರಿಗೂ ನೆನಪಿದೆ. ನೆನಪಿದೆಯೇ? 99 ನ ಪರಿಕ್ರಮಣವೂ ಪೂರ್ಣವಾಯಿತಲ್ಲವೆ! ಏನು ಯೋಚಿಸುತ್ತೀರಿ, 99 ಬಂದು ಬಿಟ್ಟಿದೆ, 99 ಬಂದು ಬಿಟ್ಟಿದೆ, ಆದರೆ ತಮ್ಮೆಲ್ಲರಿಗಾಗಿ ಸೇವೆ ಮಾಡುವ ಪರ್ವ,ನಿರ್ವಿಘ್ನವಾಗಿರುವ ವರ್ಷವು ಸಿಕ್ಕಿದೆ. 99ರಲ್ಲಿಯೇ ಮೌನ ಭಟ್ಟಿಗಳನ್ನು ಮಾಡುತ್ತಿದ್ದೀರಲ್ಲವೆ! ಪ್ರಪಂಚದವರು ಗಾಬರಿಯಾಗುತ್ತಾರೆ ಮತ್ತು ತಾವು! ಅವರೆಷ್ಟು ಗಾಬರಿಯಾಗುತ್ತಾರೆ, ಅಷ್ಟೇ ತಾವೆಲ್ಲರೂ ನೆನಪಿನ ಆಳದಲ್ಲಿ ಹೋಗುತ್ತಿದ್ದೀರಿ,ಮನಸ್ಸಿನ ಮೌನವಂತು ಇದ್ದೇ ಇದೆ, ಜ್ಞಾನ ಸಾಗರನ ಆಳದಲ್ಲಿ ಹೋಗುವುದು ಮತ್ತು ಹೊಸ-ಹೊಸ ಅನುಭವಗಳ ರತ್ನಗಳನ್ನು ತರುವುದು.ಬಾಪ್'ದಾದಾರವರು ಈ ಮೊದಲೂ ಸಹ ಸೂಚನೆಯನ್ನು ಕೊಟ್ಟಿದ್ದಾರೆ- ಎಲ್ಲದಕ್ಕಿಂತಲೂ ಅತಿ ದೊಡ್ಡ ಖಜಾನೆಯಾಗಿದೆ, ಅದು ವರ್ತಮಾನ ಮತ್ತು ಭವಿಷ್ಯವನ್ನು ರೂಪಿಸುತ್ತದೆ, ಆ ಶ್ರೇಷ್ಠ ಖಜಾನೆಯಾಗಿದೆ- ಶ್ರೇಷ್ಠ ಸಂಕಲ್ಪಗಳ ಖಜಾನೆ.ಸಂಕಲ್ಪ ಶಕ್ತಿಯು ಬಹಳ ದೊಡ್ಡ ಶಕ್ತಿಯಾಗಿದೆ, ಅದು ತಾವು ಮಕ್ಕಳ ಬಳಿ ಇದೆ- ಶ್ರೇಷ್ಠ ಸಂಕಲ್ಪಗಳ ಶಕ್ತಿ.ಸಂಕಲ್ಪವಂತು ಎಲ್ಲರ ಬಳಿಯಿದೆ ಆದರೆ ಶ್ರೇಷ್ಠ ಶಕ್ತಿ, ಶುಭಭಾವನೆ.ಶುಭಕಾಮನೆಯ ಸಂಕಲ್ಪಶಕ್ತಿ, ಮನ-ಬುದ್ಧಿಯನ್ನು ಏಕಾಗ್ರ ಮಾಡುವ ಶಕ್ತಿ- ಇದು ತಮ್ಮಬಳಿಯೇ ಇದೆ. ಮತ್ತು ಎಷ್ಟು ಮುಂದುವರೆಯುತ್ತಾ ಹೋಗುತ್ತೀರಿ, ಈ ಸಂಕಲ್ಪ ಶಕ್ತಿಯನ್ನು ಜಮಾ ಮಾಡಿಕೊಳ್ಳುತ್ತಾ ಹೋಗುತ್ತೀರಿ, ವ್ಯರ್ಥವಾಗಿ ಕಳೆಯುವುದಿಲ್ಲ, ವ್ಯರ್ಥವಾಗುವುದಕ್ಕೆ ಮುಖ್ಯ ಕಾರಣವಾಗಿದೆ- ವ್ಯರ್ಥ ಸಂಕಲ್ಪ.ಬಾಪ್’'ದಾದಾರವರು ನೋಡಿದರು ಇಡೀ ದಿನದಲ್ಲಿ ಮೆಜಾರಿಟಿ ಮಕ್ಕಳದು ಈಗಲೂ ವ್ಯರ್ಥವಿದೆ.ಹೇಗೆ ಸ್ಥೂಲ ಧನವನ್ನು ಉಳಿತಾಯ ಮಾಡಿ ಉಪಯೋಗ ಮಾಡುವವರು ಸದಾಕಾಲವು ಸಂಪನ್ನವಾಗಿರುತ್ತಾರೆ ಮತ್ತು ವ್ಯರ್ಥವಾಗಿ ಕಳೆಯುವವರು,ಒಂದಲ್ಲ ಒಂದು ಕಡೆ ಮೋಸವನ್ನನುಭವಿಸುತ್ತಾರೆ. ಶ್ರೇಷ್ಠ ಶುದ್ಧ ಸಂಕಲ್ಪದಲ್ಲಿ ಇಷ್ಟು ಶಕ್ತಿಯಿದೆ, ಅದರಿಂದ ತಮ್ಮ ಕ್ಯಾಚಿ೦ಗ್ ಪವರ್, ವೈಬ್ರೇಷನ್ನ್ನು ಕ್ಯಾಚ್ ಮಾಡುವ ಪವರ್'ನ್ನು ವೃದ್ಧಿ ಮಾಡಿಕೊಳ್ಳಬಹುದು. ಈ ವೈರ್ಲೆಸ್, ಈ ಟೆಲಿಪೋನ್. ಹೇಗೆ ಈ ವಿಜ್ಞಾನದ ಸಾಧನಗಳು ಕಾರ್ಯವನ್ನು ಮಾಡುತ್ತದೆಯೋ ಹಾಗೆಯೇ ಈ ಶುದ್ಧ ಸಂಕಲ್ಪಗಳ ಖಜಾನೆಯು ಹಾಗೆಯೇ ಕಾರ್ಯವನ್ನು ಮಾಡುತ್ತದೆ,ಅದರಿಂದ ಲಂಡನ್’ನಲ್ಲಿ ಕುಳಿತಿದ್ದರೂ ಯಾವುದೇ ಆತ್ಮನ ಪ್ರಕಂಪನವು ಅಷ್ಟು ಸ್ಪಷ್ಟವಾಗಿ ಕ್ಯಾಚ್ ಆಗುತ್ತದೆ ಹೇಗೆ ಈ ವೈರ್ ಲೆಸ್ ಅಥವಾ ಟೆಲಿಫೋನ್,ಟಿ.ವಿ. ಯಾವುದೆಲ್ಲಾ ಸಾಧನಗಳಿವೆ.ಎಷ್ಟೇ ಸಾಧನಗಳು ಬಂದಿವೆ, ಇದರಿಂದಲೂ ಸ್ಪಷ್ಟವಾಗಿ ತಮ್ಮ ಕ್ಯಾಚಿ೦ಗ್ ಪವರ್, ಏಕಾಗ್ರತೆಯ ಶಕ್ತಿಯಿಂದ ವೃದ್ಧಿಯಾಗುತ್ತದೆ. ಈ ಆಧಾರವಂತು (ವಿಜ್ಞಾನದ ಸಾಧನಗಳು) ಸಮಾಪ್ತಿಯಾಗಿಯೇ ಆಗುತ್ತದೆ. ಇವೆಲ್ಲಾ ಸಾಧನಗಳು ಯಾವುದರ ಆಧಾರದಿಂದ ಇದೇ ಲೈಟ್ ನ ಆಧಾರದ ಮೇಲೆ ಯಾವುದೆಲ್ಲಾ ಸುಖದ ಸಾಧನಗಳಿವೆ,ಅವು ಮೆಜಾರಿಟಿ ಲೈಟ್’ನ ಆಧಾರ ಮೇಲೆ ಇದೆ. ಅಂದಮೇಲೆ ತಮ್ಮ ಅಧ್ಯಾತ್ಮಿಕ ಲೈಟ್,ಆತ್ಮ ಲೈಟ್ ಈ ಕಾರ್ಯವನ್ನು ಮಾಡುವುದಕ್ಕೆ ಸಾಧ್ಯವಿಲ್ಲವೆ! ಯಾರಿಗೆ ಬೇಕು ಆ ವೈಬ್ರೇಷನನ್ನು ಸಮೀಪದಲ್ಲಿರುವವರು, ದೂರದಲ್ಲಿರುವವರು ಕ್ಯಾಚ್ ಮಾಡಲು ಸಾಧ್ಯವಾಗಬೇಕು. ಈಗ ಏಕಾಗ್ರತೆಯ ಶಕ್ತಿಯು ಮನ-ಬುದ್ಧಿಯೆರಡೂ ಏಕಾಗ್ರವಾಗಲಿ,ಆಗಲೇ ಕ್ಯಾಚಿ೦ಗ್ ಪವರ್ ಆಗುತ್ತದೆ.ಬಹಳ ಅನುಭವ ಮಾಡುತ್ತೀರಿ.ಸಂಕಲ್ಪ ಮಾಡಿದಿರಿ- ನಿಸ್ವಾರ್ಥ, ಸ್ವಚ್ಛ, ಸ್ಪಷ್ಟವಾಗಿ,ಬಹಳ ಬೇಗನೆ ಅನುಭವ ಮಾಡಿಸುತ್ತದೆ. ಸೈಲೆನ್ಸ್’ನ ಶಕ್ತಿಯ ಮುಂದೆ ಈ ಸೈನ್ಸ್ ಬಾಗುತ್ತದೆ. ಈಗ ತಿಳಿಯುತ್ತಾರೆ- ಸೈಲೆನ್ಸ್’ನಲ್ಲಿ ಏನೋ ಮಿಸ್ಸಿ೦ಗ್ ಇದೆ, ಅದನ್ನು ತುಂಬಿಸಬೇಕಾಗಿದೆ.ಆದ್ದರಿಂದ ಬಾಪ್’ದಾದಾರವರು ಮತ್ತೆ ಅಂಡರ್ ಲೈನ್ ಮಾಡಿಸುತ್ತಿದ್ದಾರೆ- ಅಂತಿಮ ಸ್ಥಿತಿ, ಅಂತಿಮ ಸೇವೆ- ಇದು ಸಂಕಲ್ಪ ಶಕ್ತಿಯು ಬಹಳ ತೀವ್ರಗತಿಯ ಸೇವೆಯನ್ನು ಮಾಡಿಸುತ್ತದೆ ಆದ್ದರಿಂದ ಸಂಕಲ್ಪ ಶಕ್ತಿಯ ಮೇಲೆ ಇನ್ನೂ ಗಮನ ಕೊಡಿ. ಸಂಕಲ್ಪ ಶಕ್ತಿಯನ್ನು ಉಳಿತಾಯ ಮಾಡಿ, ಜಮಾ ಮಾಡಿ, ಬಹಳ ಕೆಲಸಕ್ಕೆ ಬರುತ್ತದೆ. ಈ ಸಂಕಲ್ಪಶಕ್ತಿಯಿಂದ ಪ್ರಯೋಗಿಯಾಗುತ್ತೀರಿ. ಏಕೆ ಸೈನ್ಸ್ ನ ಮಹತ್ವಿಕೆಯಿದೆ? ಪ್ರಯೋಗದಲ್ಲಿ ಬರುತ್ತದೆ ಆಗಲೇ ಎಲ್ಲರೂ ತಿಳಿಯುತ್ತಾರೆ- ಹೌದು, ವಿಜ್ಞಾನವು ಬಹಳ ಓಳ್ಳೆಯ ಕೆಲಸ ಮಾಡುತ್ತದೆ. ಅಂದಮೇಲೆ ಸೈಲೆನ್ಸ್ ಪವರ್’ನ ಪ್ರಯೋಗ ಮಾಡುವುದಕ್ಕಾಗಿ ಏಕಾಗ್ರತೆಯ ಶಕ್ತಿಯಿರಬೇಕು ಮತ್ತು ಏಕಾಗ್ರತೆಗೆ ಮೂಲಾಧಾರವಾಗಿದೆ- ಮನಸ್ಸಿನ ನಿಯಂತ್ರಣಾ ಶಕ್ತಿ, ಅದರಿಂದ ಮನೋಬಲವು ಹೆಚ್ಚುತ್ತದೆ. ಮನೋಬಲದ ಮಹಿಮೆಯು ಬಹಳ ಶ್ರೇಷ್ಠವಾಗಿದೆ,ಈ ರಿದ್ದಿ-ಸಿದ್ಧಿಯವರೂ ಸಹ ಮನೋಬಲದ ಮೂಲಕ ಅಲ್ಪಕಾಲದ ಚಮತ್ಕಾರವನ್ನು ತೋರಿಸುತ್ತಾರೆ. ತಾವಂತು ವಿಧಿಪೂರ್ವಕ, ರಿದ್ಧಿ ಸಿದ್ಧಿಯಿಲ್ಲ, ವಿಧಿ ಪೂರ್ವಕ ಕಲ್ಯಾಣದ ಚಮತ್ಕಾರವನ್ನು ತೋರಿಸುತ್ತೀರಿ, ಅದು ವರದಾನವಾಗಿ ಬಿಡುತ್ತದೆ. ಆತ್ಮರಿಗಾಗಿ ಈ ಸಂಕಲ್ಪಶಕ್ತಿಯ ಪ್ರಯೋಗವು ವರದಾನವು ಸಿದ್ಧವಾಗಿ ಬಿಡುತ್ತದೆ. ಅಂದಮೇಲೆ ಮೊದಲು ಇದರ ಪರಿಶೀಲನೆ ಮಾಡಿಕೊಳ್ಳಿರಿ- ಮನಸ್ಸನ್ನು ನಿಯಂತ್ರಿಸುವ ನಿಯಂತ್ರಣಾ ಶಕ್ತಿಯಿದೆಯೇ? ಸೆಕೆಂಡಿನಲ್ಲಿ ಯಾವ ರೀತಿ ವೈಜ್ಞಾನಿಕ ಶಕ್ತಿಯ ಸ್ವಿಚ್ ಆಧಾರದಿಂದ ಸೆಕೆಂಡಿನಲ್ಲಿ ಸ್ವಿಚ್ ಆನ್ ಮಾಡಿ-ಆಫ್ ಮಾಡುತ್ತಿರಿ, ಹಾಗೆಯೇ ಸೆಕೆಂಡಿನಲ್ಲಿ ಮನಸ್ಸನ್ನು ಎಲ್ಲಿ ಬೇಕು, ಹೇಗೆ ಬೇಕು,ಎಷ್ಣು ಸಮಯ ಬೇಕು,ಅಷ್ಟು ನಿಯಂತ್ರಣ ಮಾಡಬಹುದೇ? ಬಹಳ ಒಳ್ಳೊಳ್ಳೆಯವರೂ ಸ್ವಯಂಗಾಗಿ ಹಾಗೂ ಸೇವೆಯ ಪ್ರತಿಯೂ ಸಿದ್ಧಿರೂಪವಾಗಿ ಕಂಡು ಬರುತ್ತಾರೆ. ಆದರೆ ಬಾಪ್'ದಾದಾರವರು ನೋಡುತ್ತಾರೆ- ಸಂಕಲ್ಪ ಶಕ್ತಿಯ ಜಮಾದ ಖಾತೆಯ ಬಗ್ಗೆ ಈಗ ಸಾಧಾರಣವಾದ ಗಮನವಿದೆ. ಎಷ್ಟಿರಬೇಕು ಅಷ್ಟಿಲ್ಲ,ಸಂಕಲ್ಪದ ಆಧಾರದ ಮೇಲೆ ಮಾತು ಮತ್ತು ಕರ್ಮವು ಸ್ವತಹವಾಗಿಯೇ ಚಾಲನೆಯಾಗುತ್ತದೆ. ಅದಕ್ಕಾಗಿ ಬೇರೆ-ಬೇರೆ ರೀತಿಯಿಂದ ಪರಿಶ್ರಮ ಪಡುವ ಅವಶ್ಯಕತೆ ಇಲ್ಲ,ಇಂದು ಮಾತನ್ನು ನಿಯಂತ್ರಣ ಮಾಡಿ,ಇಂದು ದೃಷ್ಟಿಯ ಬಗ್ಗೆ ಗಮನದಲ್ಲಿ ತಂದುಕೊಳ್ಳಿರಿ, ಪರಿಶ್ರಮ ಪಡಬೇಕು.ಇಂದು ವೃತ್ತಿಯ ಮೇಲೆ ಗಮನವನ್ನಿಟ್ಟು ಪರಿವರ್ತನೆ ಮಾಡಿರಿ.ಒಂದುವೇಳೆ ಸಂಕಲ್ಪ ಶಕ್ತಿಯು ಶಕ್ತಿಶಾಲಿಯಾಗಿದೆ ಎಂದರೆ ಇದೆಲ್ಲವೂ ಸ್ವತಹವಾಗಿಯೇ ನಿಯಂತ್ರಣದಲ್ಲಿ ಬಂದು ಬಿಡುತ್ತದೆ. ಪರಿಶ್ರಮದಿಂದ ಪಾರಾಗಿ ಬಿಡುತ್ತೀರಿ.ಅಂದಮೇಲೆ ಸಂಕಲ್ಪ ಶಕ್ತಿಯ ಮಹತ್ವಿಕೆಯನ್ನು ತಿಳಿದುಕೊಳ್ಳಿರಿ.ಈ ಭಟ್ಟಿಯನ್ನು ವಿಶೇಷವಾಗಿ ಇದಕ್ಕಾಗಿಯೇ ಮಾಡಿಸಲಾಗುತ್ತದೆ,ಅದು ಹವ್ಯಾಸವಾಗಿ ಬಿಡಲಿ ಎಂದು.ಇಲ್ಲಿನ ಹವ್ಯಾಸವು ಭವಿಷ್ಯದಲ್ಲಿಯೂ ಗಮನ ಕೊಟ್ಟು ಮಾಡುತ್ತಿರಬೇಕು,ಆಗಲೇ ಅವಿನಾಶಿಯಾಗುತ್ತದೆ. ತಿಳಿಯಿತೆ ಮಹತ್ವಿಕೆಯೇನಿದೆ? ತಮ್ಮ ಬಳಿ ಅತಿ ಶ್ರೇಷ್ಠವಾದ ಖಜಾನೆಯನ್ನು ತಂದೆಯು ಕೊಟ್ಟಿದ್ದಾರೆ.ಈ ಶ್ರೇಷ್ಠ ಸಂಕಲ್ಪ, ಶುಭಭಾವನೆ.ಶುಭಕಾಮನೆಯ ಸಂಕಲ್ಪದ ಖಜಾನೆಯಿದೆಯೇ? ಎಲ್ಲರಿಗೂ ತಂದೆಯು ಕೊಟ್ಟಿದ್ದಾರೆ ಆದರೆ ಜಮಾ ಮಾಡಿರುವುದು ನಂಬರ್ವಾರ್ ಆಗಿದೆ ಮತ್ತು ಪ್ರಯೋಗದಲ್ಲಿ ತರುವ ಶಕ್ತಿಯೂ ನಂಬರ್ವಾರ್ ಆಗಿದೆ. ಈಗಲೂ ಶುಭಭಾವನೆ ಅಥವಾ ಶುಭಕಾಮನೆಯನ್ನು ಪ್ರಯೋಗ ಮಾಡಿದ್ದೀರಾ? ವಿಧಿಪೂರ್ವಕವಾಗಿ ಮಾಡುವುದರಿಂದ ಸಿದ್ಧಿಯ ಅನುಭವವಾಗುತ್ತದೆಯೇ? ಈಗ ಸ್ವಲ್ಪ-ಸ್ವಲ್ಪ ಆಗುತ್ತದೆ.ಕೊನೆಗೆ ತಮ್ಮ ಸಂಕಲ್ಪಶಕ್ತಿಯು ಇಷ್ಟು ಮಹಾನ್ ಆಗಿ ಬಿಡುತ್ತದೆ,ಅದು ಸೇವೆಯಲ್ಲಿ ಮುಖದ ಮೂಲಕ ಸಂದೇಶವನ್ನು ಕೊಡುವುದರಿಂದ ಸಮಯವನ್ನೂ ತೊಡಗಿಸುತ್ತೀರಿ,ಸಂಪತ್ತನ್ನೂ ತೊಡಗಿಸುತ್ತೀರಿ,ಏರುಪೇರಿನಲ್ಲಿಯೂ ಬರುತ್ತೀರಿ,ಸುಸ್ತು ಸಹ ಆಗಿ ಬಿಡುತ್ತೀರಿ. ಆದರೆ ಶ್ರೇಷ್ಠ ಸಂಕಲ್ಪದ ಸೇವೆಯಲ್ಲಿ ಇದೆಲ್ಲವೂ ಉಳಿತಾಯವಾಗಿ ಬಿಡುತ್ತದೆ. ಅದನ್ನು ವೃದ್ಧಿಮಾಡಿಕೊಳ್ಳಿರಿ. ಈ ಸಂಕಲ್ಪ ಶಕ್ತಿಯನ್ನು ವೃದ್ಧಿ ಮಾಡುವುದರಿಂದ ಪ್ರತ್ಯಕ್ಷತೆಯೂ ಬೇಗನೆ ಆಗಿ ಬಿಡುತ್ತದೆ. ಈಗ 62-62 ವರ್ಷಗಳಾಗಿ ಬಿಟ್ಟಿದೆ, ಇಷ್ಟು ಸಮಯದಲ್ಲಿ ಎಷ್ಟು ಆತ್ಮರನ್ನು ತಯಾರು ಮಾಡಲಾಗಿದೆ? 2 ಲಕ್ಷವೂ ಪೂರ್ಣವಾಗಿಲ್ಲ,ಮತ್ತು ಇಡೀ ವಿಶ್ವಕ್ಕೆ ಸಂದೇಶವನ್ನು ತಲುಪಿಸಬೇಕಾಗಿದೆ ಅಂದಮೇಲೆ ಎಷ್ಟು ಕೋಟ್ಯಾಂತರ ಆತ್ಮರಿದ್ದಾರೆ? ಈಗಿನವರೆಗೂ ಭಗವಂತನು ಇವರಿಗೆ ಟೀಚರ್ ಆಗಿದ್ದಾರೆ,ಭಗವಂತನು ಇವರನ್ನು ನಡೆಸುತ್ತಿದ್ದಾರೆ, ಮಾಡಿಸುವಂತಹ ಪರಮಾತ್ಮನು ಮಾಡಿಸುತ್ತಿದ್ದಾರೆ.ಇದು ಸ್ಪಷ್ಟವಾಗಿಲ್ಲ. ಒಳ್ಳೆಯ ಕಾರ್ಯವಾಗಿದೆ ಮತ್ತು ಶ್ರೇಷ್ಠ ಕಾರ್ಯವನ್ನು ಮಾಡುತ್ತಿದ್ದಾರೆ-ಈ ಶಬ್ದವಂತು ಇದೆ ಆದರೆ ಮಾಡಿಸುವವರು ಈಗಲೂ ಗುಪ್ತವಾಗಿದ್ದಾರೆ.ಆದ್ದರಿಂದ ಈ ಸಂಕಲ್ಪ ಶಕ್ತಿಯಿಂದ ಪ್ರತಿಯೊಬ್ಬರ ಬುದ್ಧಿಯನ್ನು ಪರಿವರ್ತನೆ ಮಾಡಬಹುದು.ಭಲೆ ಅಹೋ ಪ್ರಭು ಎಂದು ಹೇಳುತ್ತಾ ಪ್ರತ್ಯಕ್ಷವಾಗಲಿ,ಭಲೆ ತಂದೆಯ ರೂಪದಲ್ಲಿ ಪ್ರತ್ಯಕ್ಷವಾಗಲಿ,ಅದಕ್ಕಾಗಿಯೇ ಬಾಪ್'ದಾದಾರವರು ಈಗಲೂ ಮತ್ತೆ ಗಮನ ತರಿಸುತ್ತಿದ್ದಾರೆ- ಸಂಕಲ್ಪಶಕ್ತಿಯನ್ನು ಹೆಚ್ಚಿಸಿಕೊಳ್ಳಿರಿ ಮತ್ತು ಪ್ರಯೋಗದಲ್ಲಿ ತರುತ್ತಾ ಇರಬೇಕು,ತಿಳಿಯಿತೆ.ಒಳ್ಳೆಯದು.

ಇಂದು ಮಾತೆಯರ ಅವಕಾಶವಿದೆ, ಮಾತೆಯರ ಒಂದು ಗ್ರೂಪ್ ಮತ್ತು ಮೆಡಿಸಿನ್(ಮೆಡಿಕಲ್)ನವರು, ಎರಡು ವರ್ಗವಿದೆ. ಮಾತೆಯರು ಯಾವ ಚಮತ್ಕಾರವನ್ನು ಮಾಡುತ್ತೀರಿ? ಸದಸ್ಯರಂತು ಆಗಿ ಬಿಟ್ಟಿದ್ದೀರಾ? ಮಹಿಳಾ ವರ್ಗದ ಸದಸ್ಯರಾಗಿದ್ದೀರಿ, ಒಳ್ಳೆಯ ಮಾತಲ್ಲವೆ! ಆದರೆ ಯಾರೆಲ್ಲರೂ ಸದಸ್ಯರಾಗಿದ್ದಾರೆ, ಒಳ್ಳೆಯದನ್ನು ಮಾಡಿದ್ದಾರೆ.ಈಗ ತಮ್ಮೆಲ್ಲರ ಲಿಸ್ಟ್’ನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ,ಏಕೆ ಕಳುಹಿಸಲಾಗುತ್ತದೆ ಎಂದು ಭಯ ಪಡಬೇಡಿ. ಇನ್ ಕಮ್ ಟ್ಯಾಕ್ಸ್ ನವರು ತಮ್ಮ ಬಳಿ ಬರುವುದಿಲ್ಲ.ಇದಕ್ಕಾಗಿ ಕಳುಹಿಸುತ್ತೇವೆ- ಈ ಎಲ್ಲಾ ಮಾತೆಯರು ಈಗ ಜಗನ್ಮಾತೆಯರಾಗಿ,ಜಗತ್ತನ್ನೆ ಸುಧಾರಣೆ ಮಾಡುತ್ತಾರೆ.ಈ ಕಾರ್ಯವನ್ನು ಮಾಡುತ್ತೀರಲ್ಲವೇ? ಆದ್ದರಿಂದ ತಮ್ಮ ಹೆಸರುಗಳನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ- ಇಷ್ಟು ಮಂದಿ ಮಾತೆಯರು ಪ್ರಪಂಚವನ್ನು ಸ್ವರ್ಗವಾಗಿ ಮಾಡುವವರಲ್ಲವೇ? ಕಳುಹಿಸುವುದೇ,ಕೈಯೆತ್ತಿರಿ, ಭಯ ಪಡುತ್ತಿಲ್ಲವೇ! ಭಯ ಪಡಬಾರದು ಆದರೆ ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಒಂದುವೇಳೆ ತಮ್ಮ ಪರಿಶೀಲನೆ ಮಾಡುತ್ತಾರೆಂದರೆ, ಅದರಲ್ಲಿ ಮೊದಲು ತಮ್ಮ ಸ್ವರ್ಗವಾಗಿದೆ ಏಕೆಂದರೆ ಮೊದಲು ಮನೆ ನಂತರ ವಿಶ್ವ. ಅಂದಮೇಲೆ ಯಾವುದೇ ಮಾತೆಯ ಬಳಿ ಬಂದು ನೋಡುತ್ತಾರೆಂದರೆ ಮನೆಯಲ್ಲಿ ಸುಖ-ಶಾಂತಿಯಿದೆಯೇ? ಆಗ ಕಾಣಿಸುತ್ತದೆಯೇ,ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತೀರಾ? ಅಥವಾ ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತೀರಾ, ಮನೆಯನ್ನಲ್ಲವೆ.ಮೊದಲು ಮನೆಯನ್ನು ಮಾಡಬೇಕು ಆಗಲೇ ಅನ್ಯರ ಮೇಲೂ ಪ್ರಭಾವ ಬೀರುತ್ತದೆ.ಇಲ್ಲವೆಂದರೆ ಹೇಳುತ್ತಾರೆ- ಮನೆಯಲ್ಲಿ ಕಲಹಗಳಿವೆ, ಸ್ವರ್ಗವೆಲ್ಲಿದೆ, ಆದ್ದರಿಂದ ಮಾತೆಯರು ಇಂತಹ ವಾಯುಮಂಡಲವನ್ನಾಗಿ ಮಾಡಬೇಕು,ಅಲ್ಲಿ ಯಾರೇ ನೋಡಿದರೂ ಇದೇ ಕಾಣಿಸಬೇಕು- ಮಾತೆಯರು ಬಹಳ ಒಳ್ಳೆಯ ಪರಿವರ್ತನೆಯನ್ನು ಮಾಡಿಕೊಂಡಿದ್ದಾರೆ. ಒಳ್ಳೆಯದು.

ಯಾರು ಸದಸ್ಯರಾಗಿದ್ದೀರಿ ಅವರು ಕೈಯೆತ್ತಿರಿ.. ಎಷ್ಟು ಸದಸ್ಯರಿದ್ದಾರೆ? (ಒಂದು ಸಾವಿರ ಬಂದಿದ್ದಾರೆ) ಒಂದು ಸಾವಿರವೂ ಬಹಳಷ್ಟಾಯಿತು. ಯಾರು ಸದಸ್ಯರಾಗಿರುವವರು ಕೈಯೆತ್ತಿದ್ದಾರೆ. ಅವರ ಮನೆಯಲ್ಲಿ ಸುಖ-ಶಾಂತಿ ಇದೆಯೇ? ಹೌದು ಎನ್ನುವವರು ಕೈಯತ್ತಿದರು. ನಿಂತುಕೊಳ್ಳಿರಿ. ತಿಳುವಳಿಕೆಯಲ್ಲಿ ಬಂದಿತೆ ಅಥವಾ ಹಾಗೆಯೆ ನಿಂತು ಬಿಟ್ಟಿದ್ದೀರಾ.ಮನೆಯು ಸ್ವರ್ಗವಾಗಿದೆಯೇ? ಮನೆಯಲ್ಲಿ ಶಾಂತಿಯಿದೆಯೇ? ಒಳ್ಳೆಯದು.ಇವರ ಭಾವಚಿತ್ರವನ್ನು ತೆಗೆದುಕೊಳ್ಳಿರಿ ಒಳ್ಳೆಯದು.

ನಾಲ್ಕೂ ಕಡೆಯಲ್ಲಿನ ಶ್ರೇಷ್ಟಾತ್ಮರಿಗೆ, ಆದಿ-ಮಧ್ಯ ಮತ್ತು ಅಂತ್ಯದಲ್ಲಿ ಶ್ರೇಷ್ಠ ಪಾತ್ರವನ್ನಭಿನಯಿಸುವವರಿಗೆ, ಸದಾ ತಮ್ಮ ಶ್ರೇಷ್ಠ ಸಂಕಲ್ಪದ ವಿಧಿಯನ್ನು ಅನುಭವ ಮಾಡುವಂತಹ, ಸದಾ ಸಹಜಯೋಗಿಯ ಜೊತೆ ಜೊತೆಗೆ ಪ್ರಯೋಗಿಯಾಗುವಂತಹ,ಸದಾ ಸಂಕಲ್ಪ ಶಕ್ತಿಯ ಮೂಲಕ ಸರ್ವಶಕ್ತಿಗಳನ್ನು ವೃದ್ಧಿ ಮಾಡಿಕೊಳ್ಳುವಂತಹ, ಮನಸ್ಸು ಮತ್ತು ಬುದ್ಧಿಯ ಮೇಲೆ ನಿಯಂತ್ರಣವನ್ನಿಟ್ಟುಕೊಳ್ಳುವ, ಸದಾ ಪ್ರಯೋಗಿ ಮಕ್ಕಳಿಗೆ ಬಾಪ್'ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ವರದಾನ:-
ಹಳೆಯ ಸಂಸ್ಕಾರಗಳ ಅಥವಾ ವಿಘ್ನಗಳಿ೦ದ ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸದಾ ಶಕ್ತಿ ಸಂಪನ್ನ ಭವ.  
ಯಾವುದೇ ಪ್ರಕಾರದ ವಿಘ್ನಗಳಿ೦ದ, ಬಲಹೀನತೆಗಳಿಂದ ಅಥವಾ ಹಳೆಯ ಸಂಸ್ಕಾರಗಳಿಂದ ಮುಕ್ತರಾಗಲು ಬಯಸುತ್ತೀರೆಂದರೆ ಶಕ್ತಿಯನ್ನು ಧಾರಣೆ ಮಾಡಿಕೊಳ್ಳಿರಿ ಅರ್ಥಾತ್ ಅಲಂಕಾರಿ ರೂಪದವರಾಗಿರಿ,ಯಾರು ಸದಾ ಅಲಂಕಾರಗಳಿಂದ ಶೃಂಗಾರಿತರಾಗಿರುತ್ತಾರೆಯೋ,ಅವರು ಭವಿಷ್ಯದಲ್ಲಿಯೂ ವಿಷ್ಣುವಂಶದವರಾಗುತ್ತಾರೆ ಆದರೆ ಈಗ ವೈಷ್ಣವಾರಾಗಿ ಬಿಡುತ್ತಾರೆ. ಅವರನ್ನು ಯಾವುದೇ ತಮೋಗುಣಿ ಸಂಕಲ್ಪ ಅಥವಾ ಸಂಸ್ಕಾರವು ಟಚ್ ಮಾಡಲು ಸಾಧ್ಯವಿಲ್ಲ. ಅವರು ಹಳೆಯ ಪ್ರಪಂಚ ಅಥವಾ ಪ್ರಪಂಚದ ಯಾವುದೇ ವಸ್ತು ಮತ್ತು ವ್ಯಕ್ತಿಗಳಿಂದ ಸಹಜವಾಗಿಯೇ ದೂರವಾಗಿ ಬಿಡುತ್ತಾರೆ. ಅವರನ್ನು ಯಾವುದೇ ಕಾರಣ-ಅಕಾರಣಗಳೂ ಸಹ ಟಚ್ ಮಾಡಲು ಸಾಧ್ಯವಿಲ್ಲ.
ಸ್ಲೋಗನ್:-
ಪ್ರತೀ ಸಮಯ, ಪ್ರತೀ ಕರ್ಮದಲ್ಲಿ ಬ್ಯಾಲೆನ್ಸ್ ಇಡುವುದೇ ಸರ್ವರ ಬ್ಲೆಸ್ಲಿಂಗ್(ಆಶೀರ್ವಾದ)ನ್ನು ಪ್ರಾಪ್ತಿ ಮಾಡಿಕೊಳ್ಳುವ ಸಾಧನವಾಗಿದೆ.