03/12/2016 ಪ್ರಾತಃ ಮುರಳಿ ಓಂ ಶಾಂತಿ ಬಾಪ್ ದಾದಾ ಮಧುಬನ
"ಮಧುರ ಮಕ್ಕಳೇ ಶ್ರೇಷ್ಠ ಪದವಿಗೆ ಆಧಾರ ವಿದ್ಯೆ ಮತ್ತು ನೆನಪಿನ ಯಾತ್ರೆಯ ಮೇಲಿದೆ ಆದ್ದರಿಂದ ಎಷ್ಟು ಬೇಕೋ ಅಷ್ಟು ಗ್ಯಾಲಪ್ ಮಾಡಿರಿ”
ಪ್ರಶ್ನೆ:-ಯಾವ ಗುಹ್ಯ ರಹಸ್ಯವನ್ನು ಮೊದಲೇ ತಿಳಿಸಬಾರದು- ಏಕೆ?
ಉತ್ತರ:-ಡ್ರಾಮಾದ ಗುಹ್ಯ ರಹಸ್ಯವನ್ನು ಮೊದಲೇ ತಿಳಿಸಬಾರದು,ಏಕೆಂದರೆ ಕೆಲವರು ತಬ್ಬಿಬ್ಬಾಗುತ್ತಾರೆ. ಡ್ರಾಮಾದಲ್ಲಿದ್ದರೆ ರಾಜ್ಯವು ತಾನಾಗಿಯೇ ಸಿಗುವುದು,ತಾನಾಗಿಯೇ ಪುರುಷಾರ್ಥ ಮಾಡುತ್ತೇನೆಂದು ಹೇಳುತ್ತಾರೆ.ಜ್ಞಾನದ ರಹಸ್ಯವನ್ನು ಸಂಪೂರ್ಣ ಅರಿತುಕೊಳ್ಳದೆ ಉಲ್ಟಾ ಆಗಿ ಬಿಡುತ್ತಾರೆ ಆದರೆ ಪುರುಷಾರ್ಥವಿಲ್ಲದೆ ನೀರೂ ಸಹ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳುವುದಿಲ್ಲ.
ಗೀತೆ:-ಭೋಲಾನಾಥನಿಗಿಂತ ಭಿನ್ನ ಯಾರೂ ಇಲ್ಲ.......
ಓಂ ಶಾಂತಿ.ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಗುಡ್ಮಾರ್ನಿಂಗ್, ತಂದೆಯು ಇಷ್ಟು ನಶೆಯಿಂದ ಮಕ್ಕಳಿಗೆ ಗುಡ್ಮಾರ್ನಿಂಗ್ ಹೇಳಿದರೆ ಆದರೆ ಮಕ್ಕಳು ಪ್ರತ್ಯುತ್ತರ ನೀಡಲಿಲ್ಲ, ಮಕ್ಕಳಂತೂ ಇನ್ನೂ ಮೇರು ಧ್ವನಿಯಿಂದ ಹೇಳಬೇಕಾಗಿದೆ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಗುಡ್ಮಾರ್ನಿಂಗ್ ಹೇಳುತ್ತಾರೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ, ನಾವು ಈ ಶರೀರದ ಮೂಲಕ ಆತ್ಮಿಕ ತಂದೆಗೆ ಗುಡ್ಮಾರ್ನಿಂಗ್ ಹೇಳುತ್ತೇವೆ ಅಂದಮೇಲೆ ಮಕ್ಕಳು ಅಷ್ಟು ಉಲ್ಲಾಸದಿಂದ ಹೇಳಬೇಕಲ್ಲವೆ- ವಾಹ್ ಬಾಬಾ! ಕೊನೆಗೂ ಆ ದಿನ ಇಂದು ಬಂದಿತು, ಯಾರನ್ನು ಇಡೀ ಪ್ರಪಂಚವು ಕರೆಯುತ್ತಿತ್ತೋ ಆ ತಂದೆಯು ಸನ್ಮುಖದಲ್ಲಿ ನಮ್ಮೊಂದಿಗೆ ಗುಡ್ಮಾರ್ನಿಂಗ್ ಹೇಳುತ್ತಾರೆ ನಂತರ ಯಾವಾಗ ಸತೋಪ್ರಧಾನರಾಗಿ ಬಿಡುತ್ತಾರೆಯೋ ಆಗ ಪತಿತ-ಪಾವನನನ್ನು ನೆನಪು ಮಾಡುವುದೆ ಇಲ್ಲ. ಈಗ ತಮೋಪ್ರಧಾನರಾಗಿರುವ ಕಾರಣ ಹೇ ಪತಿತ-ಪಾವನ ಬನ್ನಿ ಬಂದು ನಮ್ಮನ್ನು ಪಾವನ ಮಾಡಿ ಎಂದು ನೆನಪು ಮಾಡುತ್ತಾರೆ.ನೀವೀಗ ತಿಳಿದುಕೊಂಡಿದ್ದೀರಿ- ಅವಶ್ಯವಾಗಿ ಪತಿತ-ಪಾವನ ತಂದೆಯೇ ಬರಬೇಕಾಗುತ್ತದೆ. ಅವರೇ ಪಾರಲೌಕಿಕ ತಂದೆ ಪರಮಪಿತನಾಗಿದ್ದಾರೆ. ಕ್ರೈಸ್ಟನ್ನು ಪರಮಪಿತನೆಂದು ಹೇಳುವುದಿಲ್ಲ. ಅವರನ್ನು ಎಲ್ಲರೂ ಭಗವಂತನ ಸಂದೇಶ ಪುತ್ರನೆಂದು ಹೇಳುತ್ತಾರೆ, ಎಲ್ಲರಿಗಿಂತ ಶ್ರೇಷ್ಠ ಒಬ್ಬ ತಂದೆಯೇ ಆಗಿದ್ದಾರೆ. ಇದನ್ನೂ ತಿಳಿದುಕೊಳ್ಳುತ್ತಾರೆ- ಆ ಭಗವಂತನೇ ಈ ಪೈಗಂಬರನನ್ನು ಕಳುಹಿಸುತ್ತಾರೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ, ಇದಂತೂ ಅವಶ್ಯವಾಗಿದೆ ಪತಿತರನ್ನು ಪಾವನ ಮಾಡಲು ಪರಮಾತ್ಮನೇ ಬರಬೇಕಾಗಿದೆ, ಅವರು ನಿರಾಕಾರನಾಗಿದ್ದಾರೆ. ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ ಎಂಬುದನ್ನು ಹೇಳುತ್ತಾರೆ ಅಂದರೆ ಬ್ರಹ್ಮಾ ಮತ್ತು ವಿಷ್ಣುವಿನಲ್ಲಿ ಪರಸ್ಪರ ಸಂಬಂಧವೇನೆಂಬುದು ಯಾರಿಗೂ ತಿಳಿದಿಲ್ಲ, ನಿರಾಕಾರನಿಗೆ ಮುಖವು ಅವಶ್ಯವಾಗಿ ಬೇಕಾಗಿದೆ ಆದ್ದರಿಂದ ಇವರಿಗೆ ಭಗೀರಥನೆಂದು ಹೇಳಲಾಗುತ್ತದೆ. ಮುಖದ ಮೂಲಕವೇ ತಿಳಿಸುತ್ತಾರಲ್ಲವೆ ಮನ್ಮನಾಭವ ಎಂದು ಆದೇಶ ನೀಡುತ್ತಾರೆ ಅಂದಮೇಲೆ ಮುಖದ ಮೂಲಕವೇ ಹೇಳುತ್ತಾರಲ್ಲವೆ. ಇದರಲ್ಲಿ ಪ್ರೇರಣೆಯ ಮಾತಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ಎಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ, ಪ್ರತಿಯೊಂದರ ಸಾರವನ್ನು ತಿಳಿಸುತ್ತಾರಲ್ಲವೆ. ನೀವು ಮಾತಾ-ಪಿತಾ ನಾನು ನಿಮ್ಮ ಬಾಲಕ ಎಂದು ಹಾಡುತ್ತಾರೆ. ಅವರೇ ಇವರಲ್ಲಿ ಪ್ರವೇಶ ಮಾಡಿ ನಿಮಗೆ ಜ್ಞಾನ ಕೊಡುತ್ತಾರೆ. ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಪ್ರಜಾಪಿತ ಬ್ರಹ್ಮನಿಗೂ ಪಿತನೆಂದು ಹೇಳುತ್ತಾರೆ ಅಂದಮೇಲೆ ಮಾತೆ ಎಲ್ಲಿ? ತಂದೆಯು ತಿಳಿಸುತ್ತಾರೆ- ಇವರು ಪ್ರಜಾಪಿತನೂ ಆಗಿದ್ದಾರೆ. ಮಾತೆಯೂ ಆಗಿದ್ದಾರೆ. ನಾನಂತೂ ಎಲ್ಲಾ ಆತ್ಮರ ತಂದೆಯಾಗಿದ್ದೇನೆ, ನನ್ನನ್ನು ಗಾಡ್ ಫಾದರ್ ಎಂದು ಹೇಳುತ್ತಾರೆ. ನೀವು ಮಾತಾ-ಪಿತಾ ಎಂದು ಭಾರತವಾಸಿಗಳು ಕರೆಯುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ,ನಿರಾಕಾರನಿಗೆ ತಾಯಿಯೆಂದು ಹೇಳಲು ಹೇಗೆ ಸಾಧ್ಯ! ಆ ತಂದೆಯು ಇವರಲ್ಲಿ ಪ್ರವೇಶ ಮಾಡಿ ದತ್ತು ಮಾಡಿಕೊಳ್ಳುತ್ತಾರೆ ಆದ್ದರಿಂದ ಈ ಬ್ರಹ್ಮನು ತಾಯಿಯಾಗಿ ಬಿಡುತ್ತಾರೆ. ಇವರ ಮೂಲಕವೇ ದೈವೀ ರಚನೆಯನ್ನು ರಚಿಸುತ್ತಾರೆ. ಇವರೂ ಸಹ ದತ್ತು ತಾಯಿಯಾಗಿದ್ದಾರೆ. ಅವರು ತಂದೆಯಾಗಿದ್ದಾರೆ. ಈ ಬ್ರಹ್ಮನನ್ನು ನಂದೀಗಣ,ಎತ್ತಾಗಿಯೂ ತೋರಿಸುತ್ತಾರೆ ಆದರೆ ಹಸುವನ್ನೆಂದೂ ತೋರಿಸುವುದಿಲ್ಲ,ಇವು ಬಹಳ ಅದ್ಭುತ ಮಾತುಗಳಾಗಿವೆ. ಯಾರಾದರಾ ಹೊಸಬರು ಬಂದರೆ ಅವರಿಗೆ ವಿವರವಾಗಿ ತಿಳಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಮಾತುಗಳು ಅವರಿಗೆ ಅರ್ಥವಾಗುವುದಿಲ್ಲ, ಯಾರಾದರೂ ಸೂಕ್ಷ್ಮ ಬುದ್ಧಿಯವರಾಗಿದ್ದರೆ ಕೂಡಲೇ ಅರ್ಥ ಮಾಡಿಕೊಳ್ಳುತ್ತಾರೆ, ಮೂವತ್ತು ವರ್ಷಗಳ ಹಳಬರಿಗಿಂತಲೂ ಒಂದು ತಿಂಗಳಿನವರು ಮುಂದೆ ಹೊರಟು ಹೋಗುತ್ತಾರೆ.ಆದ್ದರಿಂದ ಬಹಳ ತಡವಾಗಿ ಬಂದಿದ್ದೇವೆಂದು ತಿಳಿದುಕೊಳ್ಳಬಾರದು. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪುರುಷಾರ್ಥ ಮಾಡಿರಿ, ಹೇಗೆ ಕಾಲೇಜಿಗೆ ಬರುವವರು ವಿದ್ಯಾಭ್ಯಾಸ ಮಾಡಿ ಮುಂದುವರೆಯುತ್ತಾರೆ. ಇಲ್ಲಿಯೂ ಹಾಗೆಯೇ, ಎಲ್ಲವೂ ವಿದ್ಯೆ ಮತ್ತು ನೆನಪಿನ ಮೇಲೆ ಆಧಾರಿತವಾಗಿದೆ. ಮಕ್ಕಳಿಗೇ ಗೊತ್ತಿದೆ- ಮೂಲವತನದಲ್ಲಿ ಆತ್ಮರು ಸತೋಪ್ರಧಾನರಾಗಿರುತ್ತದೆ, ತಮೋಪ್ರಧಾನ ಆತ್ಮರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ನಂತರ ಎಲ್ಲಾ ಪಾತ್ರಧಾರಿಗಳು ತಮ್ಮ-ತಮ್ಮ ಪಾತ್ರದನುಸಾರ ಸ್ಟೇಜಿನ ಮೇಲೆ ಬರುತ್ತಾರೆ, ನಾಟಕವೇ ಹೀಗೆ ಮಾಡಲ್ಪಟ್ಟಿದೆ. ಹದ್ದಿನ ನಾಟಕದಲ್ಲಂತೂ 50-60 ಮಂದಿ ಪಾತ್ರಧಾರಿಗಳಿರುತ್ತಾರೆ, ಇಲ್ಲಿ ಎಷ್ಟು ದೊಡ್ಡ ಬೇಹದ್ದಿನ ನಾಟಕವಾಗಿದೆ. ತಂದೆಯು ನಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ ಆದ್ದರಿಂದ ಈಗ ತಿಳಿದುಕೊಳ್ಳುತ್ತೀರಿ, ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ಎಷ್ಟು ಸಾಹುಕಾರರಾಗಿದ್ದರು.. ಅರ್ಧಕಲ್ಪ ವಿಶ್ವದ ಮಾಲೀಕರಾಗಿದ್ದರು, ಅದಕ್ಕೆ ಅದ್ವೈತ ರಾಜ್ಯವೆಂದು ಹೇಳಲಾಗುತ್ತದೆ. ಅಲ್ಲಿ ಒಂದೇ ಧರ್ಮವಿರುತ್ತದೆ, ಅದು ರಾಮರಾಜ್ಯ,ಇದು ರಾವಣರಾಜ್ಯವಾಗಿದೆ. ರಾಮ ರಾಜ್ಯದಲ್ಲಿ ವಿಕಾರವಿರುವುದಿಲ್ಲ, ವಾಸ್ತವದಲ್ಲಿ ಇದಕ್ಕೆ ಈಶ್ವರೀಯ ರಾಜ್ಯವೆಂದು ಹೇಳುತ್ತಾರೆ, ಈಶ್ವರನಿಗೆ ರಾಮನೆಂದು ಹೇಳಲಾಗುವುದಿಲ್ಲ ಬಹಳ ಮಂದಿ ರಾಮ-ರಾಮ ಎಂದು ಮಾಲೆಯನ್ನು ಜಪಿಸುತ್ತಾರೆ ಆದರೆ ನೆನಪು ಭಗವಂತನನ್ನೇ ಮಾಡುತ್ತಾರೆ. ರಾಮನಾಮವು ಸರಿಯಾಗಿದೆ. ಏಕೆಂದರೆ ಈಶ್ವರನ ನಾಮ-ರೂಪವೇನು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ, ಮನುಷ್ಯರು ಬಹಳ ಗೊಂದಲದಲ್ಲಿದ್ದಾರೆ,ರಾವಣ ಯಾರೆಂಬುದನ್ನು ತಿಳಿದುಕೊಂಡಿಲ್ಲ, ರಾವಣನನ್ನು ಸುಡಲು ಎಷ್ಟು ಖರ್ಚು ಮಾಡುತ್ತಾರೆ! ಹಿಂದಿನ ಕಾಲದಲ್ಲಿ ದಶಹರವನ್ನು ತೋರಿಸಲು ವಿದೇಶದವರನ್ನು ಕರೆಸುತ್ತಿದ್ದರು. ವಿಜ್ಞಾನವೂ ಸಹ ನೋಡಿ ಈಗ ಎಷ್ಟು ಪ್ರಭಾವಶಾಲಿಯಾಗಿದೆ. ಈ ವಿಜ್ಞಾನವು ಸುಖಕ್ಕಾಗಿಯೂ ಇದೇ, ದುಃಖಕ್ಕಾಗಿಯೂ ಇದೆ ಸುಖವಂತೂ ಇದರಿಂದ ಅಲ್ಪಕಾಲದ್ದೇ ಸಿಗುತ್ತದೆ. ಇದರಿಂದಲೇ ಈ ಪ್ರಪಂಚದ ವಿನಾಶವೂ ಆಗುತ್ತದೆ ಅಂದಮೇಲೆ ಇದು ದುಃಖವಾಯಿತಲ್ಲವೆ.. ನಿಮ್ಮದು ಶಾಂತಿಯ ಶಕ್ತಿಯಾಗಿದೆ, ಅವರದು ವೈಜ್ಞಾನಿಕ ಶಕ್ತಿಯಾಗಿದೆ. ನೀವು ಶಾಂತಿಯಿಂದ ತಮ್ಮ ಸ್ವಧರ್ಮದಲ್ಲಿರುತ್ತೀರಿ. ಇದರಿಂದ ಪವಿತ್ರರಾಗಿ ಬಿಡುತ್ತೀರಿ.ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ನೀವು ಯೋಗಬಲದಿಂದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಇದರಲ್ಲಿ ಯುದ್ಧದ ಮಾತಿಲ್ಲ, ನೀವು ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಬಾಹುಬಲದ ಮಾತೇ ಬೇರೆಯಾಗಿದೆ. ಕಲ್ಪ-ಕಲ್ಪವೂ ನೀವು ಮಕ್ಕಳೇ ಪತಿತರಿಂದ ಪಾವನರಾಗುತ್ತೀರಿ ಮತ್ತೆ ಪಾವನರಿಂದ ಪತಿತರಾಗುತ್ತೀರಿ. ಇದು ಸೋಲು-ಗೆಲುವಿನ ನಾಟಕವಾಗಿದೆ ಆದರೆ ಈ ಮಾತುಗಳು ಎಲ್ಲರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ ಬೆಹದ್ದಿನ ತಂದೆಯು ತನ್ನ ಮಕ್ಕಳಿಗೇ ತಿಳಿಸುತ್ತಾರೆ. ಅನ್ಯ ಧರ್ಮದವರು ಬರುವುದೇ ನಂತರದಲ್ಲಿ, ಇದು ಹಳೆಯ ಪ್ರಪಂಚವಾಗಿದೆ. ದೇವತಾ ಧರ್ಮದ ಬುಡವೇ ಸಡಿಲವಾಗಿ ಬಿಟ್ಟಿದೆ. ಬುಡವು ಇರಲೇ ಇಲ್ಲವೆಂದು ಹೇಳುವುದಿಲ್ಲ, ಇತ್ತು ಆದರೆ ಈಗ ಇಲ್ಲ, ಪ್ರಾಯಲೋಪವಾಗಿ ಬಿಟ್ಟಿದೆ. ಈಗ ಅನೇಕ ಧರ್ಮಗಳಿವೆ, ಇದಕ್ಕೆ ರಾವಣರಾಜ್ಯವೆಂದು ಹಾಡುತ್ತಾರೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ಹೇಳುತ್ತಾರೆ, ಈ ಚಿತ್ರದ ಅರ್ಥವೇನು ಎಂದು ಯಾರೊಂದಿಗಾದರೂ ಕೇಳಿದರೆ ಯಾರೂ ತಿಳಿಸುವುದಿಲ್ಲ, ಆತ್ಮವು ಒಂದೇ ಆಗಿದೆ, ಅವರನ್ನು ವಿಷ್ಣುವೆಂದು ಹೇಳುತ್ತಾರೆ. ವಿಷ್ಣು ಪುರಿಯನ್ನು ತೋರಿಸುತ್ತಾರೆ, ಇದು ಸಂಗಮ-ಬ್ರಹ್ಮನ ಪುರಿಯಾಗಿದೆ. ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಬೇಕು. ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ, ಈ ವಿರಾಟ ರೂಪದ ಚಿತ್ರವು ವಿಶೇಷ ಭಾರತವಾಸಿಗಳಿಗಾಗಿ ಇದೆ ಮತ್ತು ಭಾರತದಲ್ಲಿ ಅನೇಕ ಧರ್ಮದವರಿರುತ್ತಾರೆ ಆದ್ದರಿಂದ ಇದಕ್ಕೆ ವಿಭಿನ್ನ ಧರ್ಮಗಳ ವೃಕ್ಷವೆಂದೂ ಹೇಳಲಾಗುತ್ತದೆ. ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ ಆದರೆ ಇದರಲ್ಲಿ ವಿಭಿನ್ನ ಧರ್ಮಗಳಿವೆ. ಮೊದಲು ದೇವತಾ ಧರ್ಮ ನಂತರ ಇಸ್ಲಾಂ ಧರ್ಮ, ಇದು ಬ್ರಾಹ್ಮಣ ಧರ್ಮವಾಗಿದೆ. ಈ ಸಂಗಮವನ್ನು ಕುರಿತು ಯಾರಿಗೂ ಗೊತ್ತಿಲ್ಲ, ಇದು ಪುರುಷೋತ್ತಮ ಸಂಗಮಯುಗವಾಗಿದೆ. ಪುರುಷೋತ್ತಮ ಬ್ರಾಹ್ಮಣ ಧರ್ಮವಾಗಿದೆ ಅಂದರೆ ಸಮಾಜ ಸೇವೆ ಮಾಡುತ್ತೀರಿ. ನೀವು ಮಕ್ಕಳಗೆ ಆತ್ಮಿಕ ಸಮಾಜ ಸೇವಕರೆಂದು ಹೇಳಲಾಗುತ್ತದೆ. ಭಾರತದಲ್ಲಿ ಸಮಾಜ ಸೇವಕರು ಅನೇಕರಿದ್ದಾರೆ. ಅವರಿಗೂ ಸಹ ನಮ್ರತಾ ಭಾವದಿಂದ ಸೇವೆ ಮಾಡಿರಿ ಎಂದು ಕಲಿಸಿ ಕೊಡುತ್ತಾರೆ. ಯಾರು ಪಕ್ಕಾ ಕಾಂಗ್ರೆಸ್ಸಿನವರಾಗಿದ್ದರೋ ಅವರು ಕಸವನ್ನೂ ಗುಡಿಸುತ್ತಿದ್ದರು. ಕೂಲಿ ಕೆಲಸವನ್ನೂ ಮಾಡುತ್ತಿದ್ದರು. ಮೊದಲು ಯಾರು ಪಕ್ಕಾ ಆಗಿದ್ದರೋ ಅವರು ಚೀನಿಯರ ಪಾತ್ರೆಗಳಲ್ಲಿ ಊಟವನ್ನೂ ಮಾಡುತ್ತಿರಲಿಲ್ಲ, ಯಾವುದು ಕಳೆದು ಹೋಯಿತೋ ಅದು ಡ್ರಾಮಾ ಮತ್ತೆ ಅದೇ ಪುನರಾವರ್ತನೆಯಾಗುವುದು, ಈ ಮಾತುಗಳು ಅರ್ಥವಾಗದಿದ್ದರೆ ತಬ್ಬಿಬ್ಬಾಗುತ್ತಾರೆ ಆದ್ದರಿಂದ ಡ್ರಾಮಾದ ರಹಸ್ಯವನ್ನು ಮೊದಲೇ ಯಾರಿಗೂ ತಿಳಿಸಬಾರದು. ಒಂದು ವೇಳೆ ಡ್ರಾಮಾದಲ್ಲಿ ನಿಗಧಿಯಾಗಿದ್ದರೆ ನಮಗೆ ತಾನಾಗಿಯೇ ರಾಜ್ಯ ಸಿಗುವುದು ಮತ್ತು ತಾನಾಗಿಯೇ ಪುರುಷಾರ್ಥ ಮಾಡುತ್ತೇವೆ ಎಂದು ಹೇಳುತ್ತಾರೆ. ಹೀಗೆ ಉಲ್ಟಾ ಆಗಿ ಬಿಡುತ್ತಾರೆ. ಜ್ಞಾನದ ರಹಸ್ಯಗಳನ್ನು ಪೂರ್ಣ ತಿಳಿದುಕೊಳ್ಳುವುದಿಲ್ಲ.ಅರೆ! ಪುರುಷಾರ್ಥವಿಲ್ಲದೆ ನೀರೂ ಸಿಗುವುದಿಲ್ಲ, ನೀರು ಬಂದು ತಾನಾಗಿಯೇ ಬಂದು ಬಾಯಲ್ಲಿ ಬೀಳುತ್ತದೆಯೇ? ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿ ಬರುತ್ತಾರೆ. ಅವರು ಬಂದು ಸಹಜ ಮಾರ್ಗವನ್ನು ತಿಳಿಸುತ್ತಾರೆ.ಆತ್ಮವನ್ನು ಪಾವನ ಮಾಡಿಕೊಳ್ಳಲು ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ, ತಂದೆಯೇ ಪಾವನರನ್ನಾಗಿ ಮಾಡಲು ಶ್ರೀಮತ ಕೊಡುತ್ತಾರೆ, ನನ್ನನ್ನು ನೆನಪು ಮಾಡಿರಿ, ಆದರೆ ಅವರು ನಿರಾಕಾರನಾಗಿರುವುದರಿಂದ ಅವಶ್ಯವಾಗಿ ಸಾಕಾರದಲ್ಲಿ ಬಂದು ಶ್ರೀಮತ ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ- ಈ ನನ್ನ ಶರೀರವು ನಿಶ್ಚಿತವಾಗಿದೆ. ಇದು ಬದಲಾಗಲು ಸಾಧ್ಯವಿಲ್ಲ, ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಸ್ವರ್ಗದ ಸ್ಥಾಪನೆ ಮಾಡಿಸುತ್ತಾನೆಂದು ಗಾಯನವಿದೆ.ಇದು ಭಗವಾನವಾಚ ಅಲ್ಲವೇ. ಅಂದಮೇಲೆ ಮಾತನಾಡುವುದಕ್ಕಾಗಿ ಮುಖ ಬೇಕು, ಪ್ರೇರಣೆಯಿಂದ ಓದಿಸಲಾಗುವುದಿಲ್ಲ. ತಂದೆಯು ಬಂದು ಇವರ ಮೂಲಕ ಸೂಚನೆ ನೀಡುತ್ತಾರೆ. ಈ ಚಿತ್ರ ಮೊದಲಾದುವುಗಳನ್ನು ಬ್ರಹ್ಮಾ ಮಾಡಿಸಿಲ್ಲ, ಇವರೂ ಸಹ ಪುರುಷಾರ್ಥಿಯಲ್ಲವೆ. ಇವರು ಜ್ಞಾನ ಪೂರ್ಣರಲ್ಲ, ಇವರೂ ಭಕ್ತಿ ಮಾರ್ಗದಲ್ಲಿದ್ದರು, ಭಕ್ತರ ಉದ್ಧಾರವನ್ನು ಭಗವಂತನೇ ಮಾಡಬೇಕಾಗಿದೆ. ಅವರು ಬಂದು ಭಕ್ತಿಯ ಫಲವನ್ನು ಕೊಡುತ್ತಾರೆ. ನೀವು ಮಕ್ಕಳನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ತಂದೆಯು ಇವರಲ್ಲಿ ಪ್ರವೇಶ ಮಾಡಿ ರಾಜಯೋಗವನ್ನು ಕಲಿಸುತ್ತಾರೆ. ಇವರ ಹೆಸರಾಗಿದೆ-ಶಿವಬಾಬಾ, ಅವರು ತಿಳಿಸುತ್ತಾರೆ- ನನ್ನ ಜನ್ಮವು ದಿವ್ಯ ಜನ್ಮ ಅಲೌಕಿಕವಾಗಿದೆ. ನಾನು ಬರುವ ಪಾತ್ರವು ಒಂದೇ ಬಾರಿ ಈ ಸಂಗಮದಲ್ಲಿದೆ. ನೀವಾತ್ಮರು ಕರೆಯುವುದರಿಂದ ಬರುತ್ತೇನೆಂದಲ್ಲ, ಯಾವಾಗ ನನ್ನ ಬರುವಿಕೆಯ ಸಮಯವಾಗುತ್ತದೆಯೋ ಆಗ ಒಂದು ಕ್ಷಣವು ವ್ಯತಾಸವಾಗುವುದಿಲ್ಲ. ನಿಖರವಾದ ಸಮಯದಲ್ಲಿ ಬಂದು ಬಿಡುತ್ತೇನೆ. ನಾನು ನಿಮ್ಮ ಕರೆಯನ್ನು ಕೇಳಿಸಿಕೊಳ್ಳಲು ನನಗೆ ಕರ್ಮೆ೦ದ್ರಿಯಗಳಾದರೂ ಎಲ್ಲಿದೆ? ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ. ಸಮಯವು ಬಂದಾಗ ನಾನು ಬಂದು ಪತಿತರನ್ನು ಪಾವನ ಮಾಡುತ್ತೇನೆ. ನಮ್ಮ ಅರಚುವಿಕೆಯನ್ನು ಭಗವಂತನು ಕೇಳಿಸಿಕೊಳ್ಳುತ್ತಾರೆ ಎಂದಲ್ಲ, ಬಹಳ ಮಂದಿ ಮಕ್ಕಳು ಬಾಬಾ ತಾವಂತೂ ಸರ್ವಜ್ಞನಾಗಿದ್ದೀರಿ ಅಂದಮೇಲೆ ತಿಳಿಸಿ ನಾವು ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೇವೆಯೇ? ಈ ಕೆಲಸವು ಆಗುತ್ತದೆಯೇ? ಎಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ ಅರೆ! ನಾನಂತೂ ಪತಿತರನ್ನು ಪಾವನ ಮಾಡುವ ಮಾರ್ಗವನ್ನು ತಿಳಿಸಲು ಬರುತ್ತೇನೆ. ನನ್ನ ಪಾತ್ರವು ಏನಿದೆಯೋ ಅದನ್ನೇ ಅಭಿನಯಿಸುತ್ತೇನೆ. ಏನನ್ನು ತಿಳಿಸಬಾರದೋ ಅದನ್ನು ತಿಳಿಸುವುದಿಲ್ಲ, ನಾನು ಈ ಮಾತುಗಳನ್ನು ತಿಳಿಸುವುದಕ್ಕಾಗಿ ಬರುತ್ತೇನೆಯೇ? ನಾನೂ ಕೂಡ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಪ್ರತಿಯೊಬ್ಬರ ಪಾತ್ರವು ಡ್ರಾಮಾದಲ್ಲಿ ನಿಗಧಿತವಾಗಿದೆ. ಯಾರು ನಿಶ್ಚಯ ಬುದ್ಧಿಯವರಲ್ಲವೋ ಅವರು ಸ್ವರ್ಗದಲ್ಲಿ ಹೋಗಲು ಯೋಗ್ಯರಲ್ಲ, ಅಂತಹವರು ಇದೇ ರೀತಿ ಮಾತನಾಡುತ್ತಾರೆ, ಬಾಕಿ ಯಾರು ಸೂರ್ಯವಂಶಿ, ಚಂದ್ರವಂಶಿ ಮನೆತನದ ಆತ್ಮರಿದ್ದಾರೆಯೋ ಅವರು ಅವಶ್ಯವಾಗಿ ಬಂದು ತಂದೆಯಿಂದ ಕೇಳುವರು ಮತ್ತು ಆಸ್ತಿಯನ್ನು ತೆಗೆದುಕೊಳ್ಳವರು.ಯಾರು ಹೆಚ್ಚು ಪುರುಷಾರ್ಥ ಮಾಡುವುದಿಲ್ಲವೋ ಅವರೂ ಸಹ ಸ್ವರ್ಗದಲ್ಲಂತೂ ಬರುತ್ತಾರೆ ಆದರೆ ಶಿಕ್ಷೆಯನ್ನನುಭವಿಸಿ ಯಾವುದಾದರೂ ಪದವಿ ಪಡೆಯುತ್ತಾರೆ, ಬಾಬಾ, ನಾವು ಸೂರ್ಯವಂಶಿಯಾಗುತ್ತೇವೆ, ನಾರಾಯಣನಾಗುತ್ತೇವೆ ಎಂದು ಬಹಳ ಮಂದಿ ಹೇಳುತ್ತಾರೆ ಆದರೆ ಮಕ್ಕಳು ಅಷ್ಟೇ ಪುರುಷಾರ್ಥ ಮಾಡಬೇಕಲ್ಲವೆ. ತಂದೆಯನ್ನು ಅನುಸರಿಸುವ ಶಕ್ತಿ ಬೇಕು, ಫಾಲೋ ಫಾದರ್ ಎಂದು ಹೇಳುತ್ತಾರೆ ಅಂದಮೇಲೆ ಇವರನ್ನು ನೋಡಿ ಹೇಗೆ ಸಮರ್ಪಿತನಾದರು! ಎಲ್ಲವನ್ನೂ ಈಶ್ವರಾರ್ಥವಾಗಿ ಅರ್ಪಣೆ ಮಾಡಿಬಿಟ್ಟರು. ಈಶ್ವರಾರ್ಥವಾಗಿ ಎಲ್ಲವನ್ನೂ ಕೊಟ್ಟು ತನ್ನ ಮಮತ್ವವನ್ನು ಕಳೆಯಬೇಕು. ಮೊದಲು ಭಟ್ಟಿಯಿಂದ ಅನೇಕರು ತಯಾರಾದರು. ಈಗ ಅಂತಹ ಭಟ್ಟಿಯಾಗಲು ಸಾಧ್ಯವೇ! ಈ ಕಾರ್ಯದಲ್ಲಿ ಮಾತೆಯರು ಕನ್ಯೆಯರು ಮುಂದೆ ಹೋಗುತ್ತಾರೆ ಅದರಲ್ಲಿಯೂ ಕನ್ಯೆಯರು ಮುಂದೆ ಹೋಗುತ್ತಾರೆ. ಇಲ್ಲಿ ದೇಹ ಮತ್ತು ದೇಹದ ಸಂಬಂಧಗಳನ್ನು ಮರೆಯಬೇಕಾಗಿದೆ ಏಕೆಂದರೆ ಈಗ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿರಿ. ಈಗ ನಾಟಕವು ಪೂರ್ಣವಾಗುತ್ತದೆ, ಇನ್ನು ಸ್ವಲ್ಪವೇ ಸಮಯವಿದೆ, ಹೇಗೆ ಪ್ರಿಯತಮ-ಪ್ರಿಯತಮೆಯರಿರುತ್ತಾರೆ. ಈ ತಂದೆಯು ಪ್ರಿಯತಮನಾಗಿದ್ದಾರೆ, ಪ್ರಿಯತಮೆಯಲ್ಲ,ತಂದೆಯು ತಿಳಿಸುತ್ತಾರೆ-ನೀವು ಪತಿತರಾಗಿದ್ದೀರಿ ಅಂದಮೇಲೆ ನೀವೆಲ್ಲ ನೆನಪು ಮಾಡಬೇಕಾಗಿದೆ. ನಾನು ನಿಮ್ಮನ್ನು ನೆನಪು ಮಾಡಲು ನಾನೇನು ಪತಿತನಾಗಿದ್ದೇನೆಯೇ! ನಾನಂತೂ ಯುಕ್ತಿಯನ್ನು ತಿಳಿಸುತ್ತೇನೆ, ಅದರಂತೆ ನಡೆಯಿರಿ. ಈ ಪ್ರಪಂಚದಿಂದ ಮಮತ್ವವನ್ನು ಕಳೆಯುತ್ತಾ ಹೋಗಿ, ಈಗ ಮರಳಿ ಮನೆಗೆ ಹೋಗಬೇಕಾಗಿದೆ. ಇದು ಬುದ್ಧಿಯಲ್ಲಿ ಜ್ಞಾನವಿದೆ. ಶರೀರವು ಹಳೆಯದಾಗಿದೆ. ಸತ್ಯಯುಗದಲ್ಲಿ ನಿರೋಗಿ ಶರೀರವು ಸಿಗುವುದು. ನಂತರ ನಾವು ಸುಂದರರಾಗಿ ಬಿಡುತ್ತೇವೆ. ಪತಿತರಿಂದ ಹೇಗೆ ಸುಂದರರಾಗುತ್ತೇವೆ ಎಂಬುದನ್ನು ನೀವೇ ತಿಳಿದುಕೊಂಡಿದ್ದೀರಿ, ರಾಮನನ್ನು ಕಪ್ಪಾಗಿ ತೋರಿಸಿದ್ದಾರೆ. ಶಿವಲಿಂಗವನ್ನು ಕಪ್ಪಾಗಿ ತೋರಿಸಿದ್ದಾರೆ, ಶಿವನಂತೂ ಎಂದು ಕಪ್ಪಾಗುವುದಿಲ್ಲ, ಅವರು ಸದಾ ಸುಂದರನಾಗಿದ್ದಾರೆ ಅಂದಮೇಲೆ ಅವರನ್ನು ಬೆಳ್ಳಗೆ ತೋರಿಸಬೇಕು. ತಂದೆಯು ತಿಳಿಸುತ್ತಾರೆ- ಚಿತ್ರಗಳನ್ನು ನೋಡುತ್ತಿದ್ದಂತೆಯೇ ಆಕರ್ಷಣೆ ಮಾಡುವಂತಿರಲಿ, ಅಂತಹ ಚಿತ್ರಗಳನ್ನು ಮಾಡಿಸಿರಿ. ಪತ್ರಿಕೆಗಳಲ್ಲಿ ಎಷ್ಟೊಂದು ಚಿತ್ರಗಳು ಮುದ್ರಿತವಾಗುತ್ತವೆ, ನಿಮ್ಮ ಚಿತ್ರಗಳು ಅದರಲ್ಲಿ ಬರುವುದಿಲ್ಲ. ತಂದೆಯು ನೀವು ಮಕ್ಕಳನ್ನು ಬುದ್ಧಿಹೀನರಿಂದ ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ಬುದ್ಧಿವಂತರನ್ನಾಗಿ ಯಾರು ಮಾಡಿದರು? ತಂದೆಯು ಯೋಗದ ಮೂಲಕ ಈ ರೀತಿ ಮಾಡಿದರು. ನೀವು ಮಕ್ಕಳಿಗೆ ಈ ಜ್ಞಾನವು ಸಿಕ್ಕಿದೆ ಅಂದಮೇಲೆ ಅದನ್ನು ಎಲ್ಲರಿಗೂ ತಿಳಿಸಬೇಕು. ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಸರ್ಕಾರವು ಪ್ರಕಟಣೆಗಾಗಿ ಎಷ್ಟೊಂದು ಖರ್ಚು ಮಾಡುತ್ತದೆ! ಇಲ್ಲಿ ಯಾವುದು ನೀವು ಮಕ್ಕಳದೋ ಅದೇ ತಂದೆಯದು.ಯಾವುದು ತಂದೆಯದೋ ಅದೇ ನೀವು ಮಕ್ಕಳ ಕರ್ತವ್ಯವಾಗಿದೆ. ತಂದೆಯು ತಿಳಿಸುತ್ತಾರೆ- ನಾನು ನಿಷ್ಕಾಮ ಸೇವಾಧಾರಿಯಾಗಿದ್ದೇನೆ. ದಾತನಾಗಿದ್ದೇನೆ ಅಂದರೆ ನಾವು ಶಿವತಂದೆಗೆ ಕೊಡುತ್ತೇವೆ ಎಂಬ ಸಂಕಲ್ಪವನ್ನು ಮಾಡಬಾರದು, ಶಿವತಂದೆಯು 21 ಜನ್ಮಗಳಿಗಾಗಿ ವಿಶ್ವದ ಮಾಲಿಕರನ್ನಾಗಿ ಮಾಡುತ್ತಾರೆ, ಈ ತಂದೆಯು ತೆಗೆದುಕೊಳ್ಳುವುದಿಲ್ಲ ಕೊಡುತ್ತಾರೆ. ತಂದೆಯಂತೂ ದಾತನಾಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-1. ಹೇಗೆ ಬ್ರಹ್ಮಾ ತಂದೆಯು ಸಮರ್ಪಿತರಾದರೋ ಹಾಗೆಯೇ ಫಾಲೋ ಫಾದರ್ ಮಾಡಬೇಕಾಗಿದೆ. ತಮ್ಮದೆಲ್ಲವನ್ನೂ ಈಶ್ವರಾರ್ಥವಾಗಿ ಅರ್ಪಣೆ ಮಾಡಿ ಟ್ರಸ್ಟಿಯಾಗಿ ಮಮತ್ವವನ್ನು ಕಳೆಯಬೇಕಾಗಿದೆ.2. ಲಾಸ್ಟ್ ನಲ್ಲಿ ಬಂದರು ಫಾಸ್ಟ್ ಹೋಗಲು ನೆನಪು ಮತ್ತು ವಿದ್ಯೆಯಲ್ಲಿ ಸಂಪೂರ್ಣ ಗಮನ ಕೊಡಬೇಕಾಗಿದೆ.
ವರದಾನ:-ಮಾಸ್ಟರ್ ತ್ರಿಕಾಲದರ್ಶಿಯಾಗಿದ್ದು ಪ್ರತಿಯೊಂದು ಕರ್ಮವನ್ನು ಯುಕ್ತಿಯುಕ್ತವಾಗಿ ಮಾಡುವಂತಹ ಕರ್ಮ ಬಂಧನ ಮುಕ್ತ ಭವ.ಯಾವುದೆಲ್ಲಾ ಸಂಕಲ್ಪ, ಮಾತು ಅಥವಾ ಕರ್ಮವನ್ನು ಮಾಡುತ್ತೀರಿ- ಅದನ್ನು ಮಾಸ್ಟರ್ ತ್ರಿಕಾಲದರ್ಶಿಯಾಗಿದ್ದು ಮಾಡುತ್ತೀರೆಂದರೆ, ಯಾವುದೇ ಕರ್ಮವು ವ್ಯರ್ಥ ಅಥವಾ ಅನರ್ಥವಾಗಲು ಸಾಧ್ಯವಿಲ್ಲ. ತ್ರಿಕಾಲದರ್ಶಿ ಅರ್ಥಾತ್ ಸಾಕ್ಷಿತನದ ಸ್ಥಿತಿಯಲ್ಲಿ ಸ್ಥಿತರಾಗಿರುತ್ತಾ, ಕರ್ಮಗಳ ಗುಹ್ಯಗತಿಯನ್ನು ತಿಳಿದುಕೊಂಡು ಈ ಕರ್ಮೆ೦ದ್ರಿಯಗಳ ಮೂಲಕ ಕರ್ಮವನ್ನು ಮಾಡಿಸುತ್ತೀರೆಂದರೆ, ಯಾವುದೇ ಕರ್ಮವು ಬಂಧನದಲ್ಲಿ ಬಂಧಿಸುವುದಿಲ್ಲ, ಪ್ರತಿಯೊಂದು ಕರ್ಮವನ್ನು ಮಾಡಿಸುತ್ತಿರೆಂದರೆ ಕರ್ಮಬಂಧನ ಮುಕ್ತ ಕರ್ಮಾತೀತ ಸ್ಥಿತಿಯ ಅನುಭವವನ್ನು ಮಾಡುತ್ತಿರುತ್ತೀರಿ.
ಸ್ಲೋಗನ್ :-ಯಾರ ಬಳಿ ಅಲ್ಪ ಕಾಲದ ಇಚ್ಛೆಗಳ ಅವಿದ್ಯಾ ಇದೆಯೋ, ಅವರೇ ಮಹಾನ್ ಸಂಪತ್ತಿವಂತರಾಗಿದ್ದಾರೆ.
I like to invite you on our YouTube Channel
 
