“ಮಧುರ ಮಕ್ಕಳೇ - ನೀವು ಏನೆಲ್ಲವನ್ನೂ ಕೇಳುತ್ತೀರೋ ಅದರ ಬಗ್ಗೆ ವಿಚಾರ ಸಾಗರ ಮಂಥನ ಮಾಡಿರಿ, ಆಗ ಬುದ್ಧಿಯಲ್ಲಿ ಇಡೀ ದಿನ ಈ ಜ್ಞಾನವು ಹನಿಯುತ್ತಾ ಇರುವುದು”
ಪ್ರಶ್ನೆ:-
ಇಲ್ಲಿನ ಯಾವ ಕಲೆಯು ಹೊಸ ಪ್ರಪಂಚದ ಸ್ಥಾಪನೆಯಲ್ಲಿ ಕೆಲಸಕ್ಕೆ ಬರುವುದು?
ಉತ್ತರ:-
ಇಲ್ಲಿ ಯಾವ ವಿಜ್ಞಾನದ ಕಲೆಯಿದೆ,ಯಾವುದರಿಂದ ವಿಮಾನ,ಮನೆ ಇತ್ಯಾದಿಗಳನ್ನು ತಯಾರಿಸುತ್ತಾರೆಯೋ ಈ ಸಂಸ್ಕಾರವನ್ನು ಸತ್ಯಯುಗಕ್ಕೂ ಜೊತೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿ ಭಲೆ ಪೂರ್ಣ ಜ್ಞಾನವನ್ನು ತೆಗೆದುಕೊಳ್ಳದೇ ಇರಬಹುದು ಆದರೆ ಅಲ್ಲಿ ಈ ಕಲೆಯು ಜೊತೆ ಹೋಗುವುದು.ನೀವೀಗ ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗಿನ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ನಿಮಗೆ ತಿಳಿದಿದೆ- ಈ ಕಣ್ಣುಗಳಿಂದ ಏನೆಲ್ಲಾ ಹಳೆಯ ಪ್ರಪಂಚವನ್ನು ನೋಡುತ್ತೀರೋ ಅದೆಲ್ಲವೂ ಈಗ ಸಮಾಪ್ತಿಯಾಗಲಿದೆ.
ಗೀತೆ:-
ನೀನು ರಾತ್ರಿಯನ್ನು ನಿದ್ರೆ ಮಾಡುತ್ತಾ ಕಳೆದೆ,ಹಗಲನ್ನು ತಿನ್ನುತ್ತಾ ಕಳೆದೆ......
ಓಂ ಶಾಂತಿ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಹೇಗೆ 5೦೦೦ ವರ್ಷಗಳ ಮೊದಲು ತಿಳಿಸಿದ್ದರೋ ಹಾಗೆಯೇ ಹಳೆಯ ಪ್ರಪಂಚದ ವಿನಾಶ ಮತ್ತು ಹೊಸ ಪ್ರಪಂಚ ಸತ್ಯಯುಗದ ಸ್ಥಾಪನೆ ಹೇಗಾಗುತ್ತದೆ ಎಂಬುದನ್ನು ಚಾಚೂ ತಪ್ಪದೆ ತಿಳಿಸುತ್ತಿದ್ದಾರೆ. ಈಗ ಹಳೆಯ ಪ್ರಪಂಚ ಮತ್ತು ಹೊಸ ಪ್ರಪಂಚದ ಸಂಗಮಯುಗವಾಗಿದೆ.ತಂದೆಯು ತಿಳಿಸಿದ್ದಾರೆ- ಹೊಸ ಪ್ರಪಂಚ ಸತ್ಯಯುಗದಿಂದ ಹಿಡಿದು ಈಗ ಕಲಿಯುಗದ ಅಂತ್ಯದವರೆಗೆ ಏನೇನು ಆಗುತ್ತಿದೆ! ಯಾವ-ಯಾವ ಸಾಮಗ್ರಿಯಿದೆ! ಏನೇನು ನೋಡುತ್ತೀರಿ! ಯಜ್ಞ,ತಪ, ದಾನ,ಪುಣ್ಯ ಇತ್ಯಾದಿ ಏನೇನು ಮಾಡುತ್ತಾರೆ.ಇದು ಏನೆಲ್ಲವೂ ಕಾಣುತ್ತಿದೆಯೋ ಯಾವುದೂ ಉಳಿಯುವುದಿಲ್ಲ,ಹಳೆಯ ಯಾವುದೇ ವಸ್ತು ಉಳಿಯುವುದಿಲ್ಲ,ಹೇಗೆ ಹಳೆಯ ಮನೆಯನ್ನು ಬೀಳಿಸುತ್ತಾರೆಂದರೆ ಮಾರ್ಬಲ್ ಕಲ್ಲು ಮೊದಲಾದ ಒಳ್ಳೆಯ ವಸ್ತುಗಳಿರುತ್ತವೆಯೋ ಅವನ್ನು ಇಟ್ಟುಕೊಳ್ಳುತ್ತಾರೆ,ಉಳಿದನ್ನು ಬೀಳಿಸಿ ಬಿಡುತ್ತಾರೆ.ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈ ಹಳೆಯದೆಲ್ಲವೂ ಸಮಾಪ್ತಿಯಾಗಲಿದೆ ಬಾಕಿ ಯಾವ ವೈಜ್ಞಾನಿಕ ಕಲೆಯಿದೆಯೋ ಅದು ಶಾಶ್ವತವಾಗಿರುವುದು.ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ,ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗೆ ಏನೇನು ಆಗುತ್ತದೆ ಎಂಬುದೆಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ.ಈ ವಿಜ್ಞಾನವೂ ಸಹ ಇಂದು ವಿದ್ಯೆಯಾಗಿದೆ ಅದರಿಂದ ವಿಮಾನ,ವಿದ್ಯುತ ಇತ್ಯಾದಿಗಳೆಲ್ಲವೂ ಆಗಿದೆ.ಮೊದಲು ಇವು ಇರಲಿಲ್ಲ,ಈಗ ಬಂದಿವೆ.ಪ್ರಪಂಚವಂತೂ ನಡೆಯುತ್ತಿರುತ್ತದೆ, ಭಾರತವು ಅವಿನಾಶಿ ಖಂಡವಾಗಿದೆ. ಪ್ರಳಯವಂತೂ ಆಗುವುದಿಲ್ಲ, ವಿಜ್ಞಾನದಿಂದ ಈಗ ಇಷ್ಟೊಂದು ಸುಖ ಸಿಗುತ್ತದೆ, ಈ ಕಲೆಯು ಸತ್ಯಯುಗದಲ್ಲಿಯೂ ಇರುತ್ತದೆ. ಕಲಿತಿರುವ ಕಲೆಗಳು ಇನ್ನೊಂದು ಜನ್ಮದಲ್ಲಿಯೂ ಕೆಲಸಕ್ಕೆ ಬರುತ್ತದೆ. ಅಲ್ಪ ಸ್ವಲ್ಪ ಉಳಿದಿರುತ್ತದೆ, ಇಲ್ಲಿಯೂ ಸಹ ಭೂಕಂಪ ಆಗುತ್ತದೆಯೆಂದರೆ ಬಹು ಬೇಗನೆ ಎಲ್ಲವನ್ನು ಹೊಸದಾಗಿ ಮಾಡಿ ಬಿಡುತ್ತಾರೆ.ಅಲ್ಲಿ ಹೊಸ ಪ್ರಪಂಚದಲ್ಲಿ ವಿಮಾನಗಳನ್ನು ತಯಾರಿಸುವವರೂ ಇರುತ್ತಾರೆ,ಸೃಷ್ಟಿಯು ನಡೆಯುತ್ತಲೇ ಇರುತ್ತದೆ.ಇವುಗಳನ್ನು ತಯಾರಿಸುವವರೂ ಸಹ ಬರುತ್ತಾರೆ, ಅಂತಮತಿ ಸೋ ಗತಿಯಾಗುತ್ತದೆ. ಭಲೆ ಅವರಲ್ಲಿ ಈ ಜ್ಞಾನವಿಲ್ಲ ಆದರೆ ಅವರು ಅವಶ್ಯವಾಗಿ ಬರುತ್ತಾರೆ ಮತ್ತು ಹೊಸ,ಹೊಸ ವಸ್ತುಗಳನ್ನು ತಯಾರಿಸುತ್ತಾರೆ.ಈ ವಿಚಾರಗಳು ಈಗ ನಿಮ್ಮ ಬುದ್ಧಿಯಲ್ಲಿದೆ ಇದೆಲ್ಲವೂ ಸಮಾಪ್ತಿಯಾಗುತ್ತದೆ, ಕೇವಲ ಭಾರತ ಖಂಡವೇ ಉಳಿಯುತ್ತದೆ. ನೀವು ಯೋಧರಾಗಿದ್ದೀರಿ, ತಮಗಾಗಿ ಯೋಗಬಲದಿಂದ ಸ್ವರಾಜ್ಯದ ಸ್ಥಾಪನೆ ಮಾಡುತ್ತಿದ್ದೀರಿ. ಅಲ್ಲಿ ಎಲ್ಲವೂ ಹೊಸದಾಗಿರುವುದು, ತತ್ವಗಳೂ ಸಹ ಯಾವುದು ತಮೋಪ್ರಧಾನವಾಗಿದೆಯೋ ಅವು ಸತೋಪ್ರಧಾನವಾಗಿ ಬಿಡುತ್ತದೆ. ನೀವೂ ಸಹ ಹೊಸ ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಈಗ ಪವಿತ್ರರಾಗುತ್ತಿದ್ದೀರಿ. ನಾವು ಮಕ್ಕಳು ಇದನ್ನು ಕಲಿತು ಬಹಳ ಬುದ್ಧಿವಂತರಾಗುತ್ತೇವೆ. ಬಹಳ ಮಧುರ ಹೂಗಳಾಗುತ್ತೇವೆಂದು ನಿಮಗೆ ತಿಳಿದಿದೆ. ನೀವು ಯಾರಿಗಾದರೂ ಈ ಮಾತುಗಳನ್ನು ತಿಳಿಸುತ್ತೀರೆಂದರೆ ಅವರು ಬಹಳ ಖುಷಿಯಾಗುತ್ತಾರೆ, ಯಾರೆಷ್ಟು ಚೆನ್ನಾಗಿ ತಿಳಿಸುವರೋ ಅದರಂತೆ ಬಹಳ ಖುಷಿ ಪಡುತ್ತಾರೆ. ಇವರು ಬಹಳ ಚೆನ್ನಾಗಿ ತಿಳಿಸುತ್ತಾರೆಂದು ಹೇಳುತ್ತಾರೆ ಆದರೆ ಅಭಿಪ್ರಾಯವನ್ನು ಬರೆದು ಕೊಡಲು ಹೇಳಿದಾಗ ವಿಚಾರ ಮಾಡುತ್ತೇವೆ.ಇಷ್ಟರಲ್ಲಿಯೇ ನಾವು ಹೇಗೆ ಬರೆಯುವುದು ಎಂದು ಹೇಳುತ್ತಾರೆ. ಒಂದು ಬಾರಿ ಕೇಳಿದೊಡನೆ ತಂದೆಯ ಜೊತೆ ಹೇಗೆ ಬುದ್ಧಿಯೋಗವನ್ನಿಡುವುದು ಎಂಬುದನ್ನು ಕಲಿಯುವುದಿಲ್ಲ. ಇಷ್ಟವಂತೂ ಆಗುತ್ತದೆ.ನೀವು ಇದನ್ನು ಅವಶ್ಯವಾಗಿ ತಿಳಿಸುತ್ತೀರಿ- ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ. ಪಾಪಗಳ ಹೊರೆಯು ತಲೆಯ ಮೇಲೆ ಬಹಳಷ್ಟಿದೆ, ಇದು ಪತಿತ ಪ್ರಪಂಚವಾಗಿದೆ, ಬಹಳ ಪಾಪಗಳನ್ನು ಮಾಡಿದ್ದಾರೆ. ರಾವಣ ರಾಜ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದಲೇ ಪತಿತ-ಪಾವನ ತಂದೆಯನ್ನು ಕರೆಯುತ್ತಾರೆ. ಈ ಜ್ಞಾನವು ನಿಮಗೆ ಈಗ ಇದೆ. ಸತ್ಯಯುಗದಲ್ಲಿ ಇದರ ನಂತರ ತ್ರೇತಾಯುಗವು ಬರುವುದು ಎಂಬುದೇನೂ ತಿಳಿದಿರುವುದಿಲ್ಲ, ಅಲ್ಲಂತೂ ಪ್ರಾಲಬ್ದವನ್ನು ಭೋಗಿಸುತ್ತೀರಿ. ಈಗ ನೀವು ಮಕ್ಕಳು ಎಷ್ಟು ಬುದ್ಧಿವಂತರಾಗುತ್ತೀರಿ.ತಿಳಿದುಕೊಂಡಿದ್ದೀರಿ-ನಮಗೆ ಆತ್ಮಿಕ ತಂದೆಯು ಓದಿಸುತ್ತಾರೆ. ತಂದೆಯು ವಿಶ್ವದ ಆಲ್ ಮೈಟಿ ಅಥಾರಿಟಿಯಾಗಿದ್ದಾರೆ. ಆ ಮನುಷ್ಯರು ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ, ಈ ಶಾಸ್ತ್ರಗಳನ್ನು ಓದುವವರಿಗೆ ಆಲ್ ಮೈಟಿ ಎಂದು ಹೇಳಲಾಗುವುದಿಲ್ಲ, ಇವೆಲ್ಲವೂ ಭಕ್ತಿ ಮಾರ್ಗದ ಶಾಸ್ತ್ರಗಳಾಗಿವೆ. ಬಾಕಿ ಈ ವಿದ್ಯೆಯನ್ನು ತಂದೆಯು ನಿಮಗೆ ಓದಿಸುತ್ತಿದ್ದಾರೆ, ಇವು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿವೆ ಆದ್ದರಿಂದ ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕಾಗಿದೆ. ಬುದ್ಧಿಯಲ್ಲಿ ಇಡೀ ದಿನ ಈ ಜ್ಞಾನವು ಹನಿಯುತ್ತಿರಲಿ, ವಿದ್ಯಾರ್ಥಿಗಳು ಯಾರು ಓದುತ್ತಾರೆಯೋ ಅವರು ಮತ್ತೆ ರಿವೈಸ್ ಮಾಡುತ್ತಾರೆ. ಅದನ್ನೇ ವಿಚಾರ ಸಾಗರ ಮಂಥನವೆಂದು ಹೇಳಲಾಗುತ್ತದೆ. ನೀವಿದನ್ನು ತಿಳಿದುಕೊಳ್ಳುತ್ತೀರಿ- ತಂದೆಯು ನಮಗೆ ಬೇಹದ್ದಿನ ವಿದ್ಯೆ ಅಥವಾ ಸೃಷ್ಟಿಯ ಆದಿ,ಮಧ್ಯ,ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ.ಯಾವುದನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ನಿಮಗೆ ಬಹಳ ಖುಷಿಯಿರಬೇಕು. ನೀವು ಮಕ್ಕಳು ದೊಡ್ಡ ವ್ಯಕ್ತಿಗಳಾಗಿದ್ದೀರಿ, ನಿಮಗೆ ಓದಿಸುವವರು ಸಹ ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ ಅಂದಮೇಲೆ ನಿಮಗೆ ಸದಾ ಖುಷಿಯ ನಶೆಯೇರಿರಬೇಕು. ಸದಾ ಬುದ್ಧಿಯಲ್ಲಿ ಈ ಮಾತುಗಳನ್ನು ರಿವೈಸ್ ಮಾಡಿಕೊಳ್ಳಿ- ಮೊಟ್ಟ ಮೊದಲು ನಾವು ಪಾವನರಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿ ಬಿಟ್ಟೆವು. ಈಗ ಡ್ರಾಮಾ ಪ್ಲಾನಾನುಸಾರ ತಂದೆಯು ಪಾವನರನ್ನಾಗಿ ಮಾಡುತ್ತಿದ್ದಾರೆ. ನಾವು ರಚಯಿತ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದು ಸಾಧು-ಸಂತರೆಲ್ಲರೂ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಕ್ರಿಸ್ತನು ಮತ್ತೆ ತನ್ನ ಸಮಯದಲ್ಲಿ ಬರುವರು, ಕ್ರಿಶ್ಚಿಯನ್ನರದು ಇಡೀ ಪೃಥ್ವಿಯ ಮೇಲೆ ರಾಜ್ಯವಿತ್ತು, ಈಗ ಎಲ್ಲರೂ ಬೇರೆ-ಬೇರೆಯಾಗಿ ಬಿಟ್ಟಿದ್ದಾರೆ. ಪರಸ್ಪರ ಜಗಳ-ಕಲಹ ಮಾಡುತ್ತಿದ್ದಾರೆ. ಈಗ ಒಂದು ರಾಜ್ಯ,ಒಂದು ಭಾಷೆ ಬರಲಿ, ಮತ ಭೇದವಿರಬಾರದೆಂದು ಹೇಳುತ್ತಾರೆ.ಆದರೆ ಇದು ಹೇಗೆ ಸಾಧ್ಯ! ಈಗಂತೂ ಪರಸ್ಪರ ಹೊಡೆದಾಡಿ ಇನ್ನೂ ಪಕ್ಕಾ ಆಗಿ ಬಿಟ್ಟಿದ್ದಾರೆ ಅಂದಮೇಲೆ ಇವರೆಲ್ಲರದೂ ಒಂದು ದೈವೀ ಮತವಾಗಲು ಸಾಧ್ಯವಿಲ್ಲ. ಭಲೆ ರಾಮರಾಜ್ಯ ಬೇಕೆಂದು ಹೇಳುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ನಿಮಗೂ ಸಹ ಮೊದಲು ಏನೂ ತಿಳಿದಿರಲಿಲ್ಲ, ನೀವೀಗ ಬ್ರಾಹ್ಮಣರಾಗಿದ್ದೀರಿ, ನಮ್ಮ ನಮ್ಮ ಯುಗವೇ ಬೇರೆಯಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಈ ಸಂಗಮಯುಗದಲ್ಲಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುತ್ತದೆ. ನೀವು ಬ್ರಾಹ್ಮಣರು ರಾಜಖುಷಿಗಳಾಗಿದ್ದೀರಿ, ನೀವು ಪವಿತ್ರರೂ ಆಗಿದ್ದೀರಿ ಮತ್ತು ಶಿವತಂದೆಯಿಂದ ರಾಜ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಅವರು ಬ್ರಹ್ಮತತ್ವದೊಂದಿಗೆ ಬುದ್ಧಿಯೋಗವನ್ನಿಡುತ್ತಾರೆ,ಒಬ್ಬ ತಂದೆಯೊಂದಿಗೆ ಇಡುವುದಿಲ್ಲ, ಕೆಲವರು ಕೆಲವರೊಂದಿಗೆ ಬುದ್ಧಿಯೋಗವನ್ನಿಡುತ್ತಾರೆ, ಒಬ್ಬರು ಒಂದು ದೇವತೆಯ ಪೂಜಾರಿಯಾದರೆ ಇನ್ನೊಬ್ಬರು ಇನ್ನೊಂದು ದೇವತೆಗೆ ಪೂಜಾರಿಯಾಗಿದ್ದಾರೆ. ಸರ್ವ ಶ್ರೇಷ್ಠನು ಯಾರೆಂಬುದು ಯಾರಿಗೂ ತಿಳಿದಿಲ್ಲ.ಆದ್ದರಿಂದ ತಂದೆಯು ಹೇಳಿದ್ದಾರೆ ಇವರೆಲ್ಲರೂ ಆಸುರೀ ಸಂಪ್ರದಾಯದವರು, ತುಚ್ಛ ಬುದ್ಧಿಯವರಾಗಿದ್ದಾರೆ, ರಾವಣನ ಶಿಷ್ಯರಾಗಿದ್ದಾರೆ. ನೀವೀಗ ಶಿವತಂದೆಯ ಮಕ್ಕಳಾಗಿದ್ದೀರಿ, ನಿಮಗೆ ತಂದೆಯಿಂದ ಹೊಸ ಪ್ರಪಂಚ ಸತ್ಯಯುಗದ ಆಸ್ತಿಯು ಸಿಗುತ್ತದೆ. ತಂದೆಯು ತಿಳಿಸುತ್ತಾರೆ- ಹೇ ಆತ್ಮರೇ, ನೀವೀಗ ತಮೋಪ್ರಧಾನರಿಂದ ಸತೋಪ್ರಧಾನರು ಅವಶ್ಯವಾಗಿ ಆಗಬೇಕಾಗಿದೆ.ಆದ್ದರಿಂದ ಕೇವಲ ನನ್ನನ್ನು ನೆನಪು ಮಾಡಿರಿ, ಎಷ್ಟು ಸಹಜ ಮಾತಾಗಿದೆ! ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಮತ್ತು ಕೃಷ್ಣನನ್ನು ದ್ವಾಪರಯುಗದಲ್ಲಿ ತೋರಿಸಿದ್ದಾರೆ, ಇದು ಬಹಳ ದೊಡ್ಡ ತಪ್ಪಾಗಿದೆ ಆದರೆ ಈ ಮಾತುಗಳು ಯಾರು ಇಲ್ಲಿಗೆ ಸದಾ ಬರುತ್ತಾರೆಯೋ ಅವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತವೆ.ಮೇಳಗಳಲ್ಲಿ ಬಹಳ ಮಂದಿ ಬರುತ್ತಾರೆ ಆದರೆ ಅವರಲ್ಲಿ ಕೆಲವೇ ಸಸಿಗಳು ಉಳಿದುಕೊಳ್ಳುತ್ತದೆ. ಅನೇಕ ಧರ್ಮದವರು ಬರುತ್ತಾರೆ ಅದರಲ್ಲಿಯೂ ಹೆಚ್ಚು ಹಿಂದೂ ಧರ್ಮದವರು ಯಾರು ದೇವಿ-ದೇವತೆಗಳ ಪೂಜಾರಿಗಳಾಗಿರುವರೋ ಅವರೇ ಬರುತ್ತಾರೆ.ತಾವೇ ಪೂజ్య,ತಾವೇ ಪೂಜಾರಿ.ಇದರ ಅರ್ಥವನ್ನು ತಿಳಿಸಬೇಕಾಗುತ್ತದೆ. ಮೇಳ, ಪ್ರದರ್ಶನಿಗಳಲ್ಲಿ ಅಷ್ಟು ಹೆಚ್ಚಿನದಾಗಿ ತಿಳಿಸಲು ಸಾಧ್ಯವಾಗುವುದಿಲ್ಲ, ಕೆಲವರಂತೂ ನಾಲ್ಕೈದು ತಿಂಗಳವರೆಗೆ ಬರುತ್ತಾರೆ. ತಿಳಿದುಕೊಳ್ಳುತ್ತಾರೆ- ಇನ್ನು ಕೆಲವರು ಸ್ವಲ್ಪ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ನೀವು ಎಷ್ಟು ಹೆಚ್ಚಿನದಾಗಿ ಪ್ರದರ್ಶನಿ ಮೇಳಗಳನ್ನಿಡುತ್ತೀರೋ ಅಷ್ಟು ಹೆಚ್ಚು ಮಂದಿ ಬರುತ್ತಾರೆ. ಈ ಜ್ಞಾನವು ಬಹಳ ಚೆನ್ನಾಗಿದೆ ಹೋಗಿ ತಿಳಿದುಕೊಳ್ಳೊಣವೆಂದು ಬರುತ್ತಾರೆ, ಸೇವಾ ಕೇಂದ್ರದಲ್ಲಿ ಇಷ್ಟು ಚಿತ್ರಗಳಿರುವುದಿಲ್ಲ,ಪ್ರದರ್ಶನಿಯಲ್ಲಿ ಬಹಳ ಚಿತ್ರಗಳಿರುತ್ತವೆ.ನೀವು ತಿಳಿಸಿದಾಗ ಅವರಿಗೆ ಇಷ್ಟವೂ ಆಗುತ್ತದೆ ಆದರೆ ಹೊರಗಡೆ ಹೋಗುತ್ತಿದ್ದಂತೆಯೇ ಮಾಯೆಯ ವಾಯುಮಂಡಲವಿರುತ್ತದೆ,ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ತೊಡಗುತ್ತಾರೆ. ಈಗ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸದಾಗುವುದು ಮತ್ತು ತಂದೆಯು ನಮಗಾಗಿ ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ನಾವು ಹೋಗಿ ಹೊಸ ಪ್ರಪಂಚದಲ್ಲಿ ಹೊಸ ಮಹಲುಗಳನ್ನು ಕಟ್ಟುತ್ತೇವೆ, ಕೆಳಗಿನಿಂದ ಮಹಲುಗಳು ಮೇಲೆ ಬರುತ್ತವೆಯೆಂದಲ್ಲ,ಮೊಟ್ಟ ಮೊದಲು ಮುಖ್ಯವಾಗಿ ಈ ಮಾತನ್ನು ನಿಶ್ಚಯ ಮಾಡಿಕೊಳ್ಳಬೇಕು- ಅವರು ನಮ್ಮ ತಂದೆಯು ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ.ಅವರಲ್ಲಿ ಸಂಪೂರ್ಣ ಜ್ಞಾನವಿದೆ ಆದ್ದರಿಂದಲೇ ಜ್ಞಾನಸಾಗರ ಎಂದು ಮಹಿಮೆಯನ್ನು ಹಾಡುತ್ತಾರೆ. ಆ ಬೀಜವು ಜಡವಾಗಿರುತ್ತದೆ, ಅದು ಮಾತನಾಡಲು ಸಾಧ್ಯವಿಲ್ಲ, ಇವರು ಚೈತನ್ಯವಾಗಿದ್ದಾರೆ, ತಂದೆಯು ಅನ್ಯರಿಗೆ ತಿಳಿಸುವುದಕ್ಕಾಗಿ ಸಂಪೂರ್ಣ ಜ್ಞಾನವನ್ನು ನಿಮಗೆ ಕಲಿಸಿದ್ದಾರೆ. ಮೇಳ, ಪ್ರದರ್ಶನಿಗಳಲ್ಲಿಯೂ ಬಹಳ ಮಂದಿ ಬರುತ್ತಾರೆ ಆದರೆ ಕೋಟಿಯಲ್ಲಿ ಕೆಲವರೇ ಉಳಿದುಕೊಳ್ಳುತ್ತಾರೆ.7-8 ದಿನಗಳ ಕಾಲ ಬಂದು ಮತ್ತೆ ಮಾಯವಾಗಿ ಬಿಡುತ್ತಾರೆ.ಹೀಗೆ ಮಾಡುತ್ತಾ-ಮಾಡುತ್ತಾ ಯಾರಾದರೂ ಪಕ್ಕಾ ಆಗಿಯೇ ಆಗುವರು.ಸಮಯವು ಕಡಿಮೆಯಿದೆ,ವಿನಾಶವು ಸನ್ಮುಖದಲ್ಲಿ ನಿಂತಿದೆ. ಕರ್ಮಾತಿತ ಸ್ಥಿತಿಯನ್ನು ಅವಶ್ಯವಾಗಿ ಪಡೆಯಬೇಕಾಗಿದೆ.ಪತಿತರಿಂದ ಪಾವನರಾಗುವುದಕ್ಕಾಗಿ ನೆನಪು ಮಾಡುವುದು ಅತ್ಯವಶ್ಯಕವಾಗಿದೆ.ತಮ್ಮ ಸಂಭಾಲನೆ ಮಾಡಿಕೊಳ್ಳಬೇಕು,ನಾನು ಸತೋಪ್ರಧಾನನಾಗಬೇಕೆಂಬ ಚಿಂತೆಯಿರಲಿ ಏಕೆಂದರೆ ತಲೆಯ ಮೇಲೆ ಜನ್ಮ-ಜನ್ಮಾ೦ತರದ ಹೊರೆಯುದೆ.ರಾವಣ ರಾಜ್ಯವಾದಾಗಿನಿಂದ ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಈಗ ಯೋಗಬಲದಿಂದ ಮೇಲೇರಬೇಕಾಗಿದೆ.ಹಗಲು-ರಾತ್ರಿ ಇದೇ ಚಿಂತೆಯಿರಲಿ-ನಾನು ಸತೋಪ್ರಧಾನನಾಗಬೇಕು ಮತ್ತು ಸೃಷ್ಟಿಚಕ್ರದ ಜ್ಞಾನವು ಬುದ್ಧಿಯಲ್ಲಿರಲಿ.ಶಾಲೆಯಲ್ಲಿಯೂ ಸಹ ನಾವು ಇಂತಿಂತಹ ವಿಷಯದಲ್ಲಿ ತೇರ್ಗಡೆಯಾಗಬೇಕೆಂಬುದೇ ಇರುತ್ತದೆ.ಇಲ್ಲಿ ಮುಖ್ಯವಾದುದು ನೆನಪಿನ ಸಬ್ಜೆಕ್ಟ್ ಆಗಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಇರಬೇಕಾಗಿದೆ.ನಿಮ್ಮ ಬುದ್ಧಿಯಲ್ಲಿ ಏಣಿಯ ಜ್ಞಾನವಿದೆ- ನಾವೀಗ ತಂದೆಯ ನೆನಪಿನಿಂದ ಸತ್ಯಯುಗೀ ಸೂರ್ಯವಂಶಿ ಮನೆತನದ ಏಣಿಯನ್ನು ಹತ್ತುತ್ತೇವೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಏಣಿಯನ್ನಿಳಿಯುತ್ತಾ ಬಂದೆವು. ಈಗ ಸ್ವಲ್ಪವೇ ಸಮಯದಲ್ಲಿ ಮೇಲೇರಬೇಕಾಗಿದೆ. ಸೆಕೆಂಡಿನಲ್ಲಿ ಜೀವನ್ನುಕ್ತಿಯೆಂದು ಗಾಯನವಿದೆಯಲ್ಲವೆ. ಈ ಜನ್ಮದಲ್ಲಿಯೇ ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯನ್ನು ಪಡೆದು ದೇವತೆಗಳಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವೇ ಸೂರ್ಯವಂಶಿಯರಾಗಿದ್ದಿರಿ.ನಂತರ ಚಂದ್ರವಂಶಿ,ವೈಶ್ಯವಂಶಿಯರಾದಿರಿ. ಈಗ ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡುತ್ತೇನೆ. ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನು ಬಂದು ಬ್ರಾಹ್ಮಣ,ದೇವತಾ,ಕ್ಷತ್ರಿಯ ಮೂರು ಧರ್ಮಗಳ ಸ್ಥಾಪನೆ ಮಾಡುತ್ತಾರೆ. ನಾವೀಗ ಬ್ರಾಹ್ಮಣ ವರ್ಣದಲ್ಲಿದ್ದೇವೆ ನಂತರ ದೇವತಾ ವರ್ಣದಲ್ಲಿ ಬರುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಮಕ್ಕಳಿಗೆ ನಿತ್ಯವೂ ಬುದ್ಧಿಯಲ್ಲಿ ಎಷ್ಟೊಂದು ಜ್ಞಾನವನ್ನು ತುಂಬಲಿಸುತ್ತಾ ಇರುತ್ತಾರೆ.ಅದನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ,ಇಲ್ಲದಿದ್ದರೆ ತಮ್ಮ ಸಮಾನರನ್ನಾಗಿ ಹೇಗೆ ಮಾಡಿಕೊಳ್ಳುವಿರಿ! ಸೂರ್ಯವಂಶಿ ಮನೆತನದಲ್ಲಿ ಬಹಳ ಕೆಲವರೇ ಬರುತ್ತಾರೆ, ಯಾರು ಚೆನ್ನಾಗಿ ಓದುತ್ತಾರೆ ಮತ್ತು ಓದಿಸುತ್ತಾರೆ.
ಈ ಸಮಯದಲ್ಲಿ ನಿಮ್ಮ ಗತಿಮತವು ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ ಹೇಗೆ ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಹೇಳುತ್ತಾರೆ. ನಿಮ್ಮ ವಿನಃ ಯಾರೂ ತಂದೆಯೊಂದಿಗೆ ಯೋಗವನ್ನಿಡುವುದಿಲ್ಲ,ಪ್ರದರ್ಶನಿಯಲ್ಲಿ ಬರುತ್ತಾರೆ, ಹೊರಟು ಹೋಗುತ್ತಾರೆ. ಅಂತಹವರು ಪ್ರಜೆಗಳಾಗುತ್ತಾರೆ ಆದರೆ ಯಾರು ಚೆನ್ನಾಗಿ ಓದಿ-ಓದಿಸುವರೋ ಅವರು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ ಮತ್ತೆ ನಿಮ್ಮ ಈ ಮಷಿನರಿಯು ಪ್ರಭಾವಶಾಲಿಯಾಗುತ್ತಾ ಹೋಗುವುದು. ಅನೇಕರಿಗೆ ಆಕರ್ಷಣೆಯಾಗುತ್ತದೆ, ಬರತೊಡಗುತ್ತಾರೆ, ಹೊಸ ಮಾತು ಹರಡುವುದರಲ್ಲಿ ಸಮಯವು ಹಿಡಿಸುತ್ತದೆಯಲ್ಲವೆ. ಚಿತ್ರಗಳೂ ಸಹ ಸ್ವಲ್ಪವೇ ಸಮಯದಲ್ಲಿ ಬಹಳಷ್ಟು ತಯಾರಾಗುತ್ತವೆ. ದಿನ-ಪ್ರತಿದಿನ ಮನುಷ್ಯರು ಸಹ ವೃದ್ಧಿಯಾಗುತ್ತಾ ಹೋಗುತ್ತಾರೆ.
ನೀವು ತಿಳಿದುಕೊಂಡಿದ್ದೀರಿ- ಯಾವ ಬಾಂಬು ಇತ್ಯಾದಿಗಳ ಯುದ್ಧವಾಗುವುದೋ ಇದರಿಂದ ಯಾವ ಗತಿಯಾಗಬಹುದು! ದಿನ-ಪ್ರತಿದಿನ ದುಃಖವು ಹೆಚ್ಚುತ್ತಾ ಹೋಗುವುದು. ಕೊನೆಗೆ ಈ ದುಃಖದ ಪ್ರಪಂಚವೇ ಸಮಾಪ್ತಿಯಾಗುತ್ತದೆ. ಸಂಪೂರ್ಣ ವಿನಾಶವಾಗುವುದಿಲ್ಲಿ, ಶಾಸ್ತ್ರಗಳಲ್ಲಿ ಗಾಯನವಿದೆ, ಈ ಭಾರತವು ಅವಿನಾಶಿ ಖಂಡವಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಮ್ಮ ಸ್ಪಷ್ಟ ನೆನಪಾರ್ಥವು ಅಬುನಲ್ಲಿದೆ. ಅದರ ಬಗ್ಗೆ ತಿಳಿಸಬೇಕು ಅದು ಜಡ ನೆನಪಾರ್ಥವಾಗಿದೆ ಇಲ್ಲಿ ಪ್ರತ್ಯಕ್ಷದಲ್ಲಿ ಸ್ಥಾಪನೆಯಾಗುತ್ತಿದೆ. ವೈಕುಂಠಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ದಿಲ್ ವಾಡಾ ಮಂದಿರವು ಎಷ್ಟು ಚೆನ್ನಾಗಿ ಮಾಡಲ್ಪಟ್ಟಿದೆ. ನಾವೂ ಸಹ ಇಲ್ಲಿ ಬಂದು ಕುಳಿತಿದ್ದೇವೆ. ಮೊದಲೆ ನಮ್ಮ ನೆನಪಾರ್ಥವು ಇಲ್ಲಿ ಮಾಡಲ್ಪಟ್ಟಿದೆ.ನೀವು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿ ಇಲ್ಲಿ ಕುಳಿತಿದ್ದೀರಿ. ಬಾಬಾ, ತಮ್ಮಿಂದ ನಾವು ರಾಜ್ಯವನ್ನು ಪಡೆದೇ ತೀರುತ್ತೇವೆಂದು ಹೇಳುತ್ತಾರೆ. ಯಾರು ಚೆನ್ನಾಗಿ ಇಡೀ ದಿನ ಸ್ಮರಣೆ ಮಾಡುತ್ತಾ,ಮಾಡಿಸುತ್ತಾ ಇರುವರೋ ಅವರಿಗೆ ಖುಷಿಯಿರುತ್ತದೆ. ವಿದ್ಯಾರ್ಥಿಯು ನಾನು ತೇರ್ಗಡೆಯಾಗುತ್ತೇನೆಯೇ, ಇಲ್ಲವೆ ಎಂಬುದನ್ನು ಸ್ವಯಂ ತಿಳಿದುಕೊಳ್ಳುತ್ತಾರೆ. ಲಕ್ಷಾ೦ತರ ಮಂದಿಯಲ್ಲಿ ಕೆಲವರಿಗೇ ವಿದ್ಯಾರ್ಥಿ ವೇತನವು ದೊರೆಯುತ್ತದೆ.ಮುಖ್ಯ ಬಹುಮಾನಗಳು 8 ಚಿನ್ನದ್ದು, ನಂತರ 108 ಬೆಳ್ಳಿಯದು, ಬಾಕಿ 16೦೦೦ ತಾಮ್ರದ್ದು, ಹೇಗೆ ನೋಡಿ, ಪೋಪರು ಪದಕಗಳನ್ನು ಕೊಡುತ್ತಿದ್ದರು, ಅಂದಾಗ ಎಲ್ಲರಿಗೆ ಚಿನ್ನದ ಪದಕವನ್ನು ಕೊಡುವರೇ? ಕೆಲವರಿಗೆ ಚಿನ್ನದ್ದು, ಕೆಲವರಿಗೆ ಬೆಳ್ಳಿಯದು. ಮಾಲೆಯೂ ಸಹ ಇದೇ ರೀತಿ ಆಗುತ್ತದೆ. ನೀವು ಚಿನ್ನದ ಬಹುಮಾನವನ್ನು ತೆಗೆದುಕೊಳ್ಳಲು ಇಚ್ಛಿಸುತ್ತೀರಿ, ಬೆಳ್ಳಿಯ ಬಹುಮಾನ ಪಡೆಯುವುದರಿಂದ ಚಂದ್ರವಂಶದಲ್ಲಿ ಬರುತ್ತೀರಿ. ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ, ಮತ್ತ್ಯಾವುದೇ ಉಪಾಯವೇ ಇಲ್ಲ, ತೇರ್ಗಡೆಯಾಗಬೇಕೆಂಬ ಚಿಂತೆಯನ್ನಿಟ್ಟುಕೊಳ್ಳಿ. ಯುದ್ಧದ ಏರುಪೇರುಗಳು ಹೆಚ್ಚಾದರೆ ಸಾಕು ಬಹಳ ಜೋರಾಗಿ ಪುರುಷಾರ್ಥ ಮಾಡತೊಡಗುವರು. ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳೂ ಸಹ ಚೆನ್ನಾಗಿ ಓದುವ ಪುರುಷಾರ್ಥದಲ್ಲಿ ತೊಡಗುತ್ತಾರೆ. ಇದು ಬೇಹದ್ದಿನ ಶಾಲೆಯಾಗಿದೆ, ಪ್ರದರ್ಶನಿಯಲ್ಲಿ ಹೆಚ್ಚು ಅಭ್ಯಾಸ ಮಾಡುತ್ತಾ ಇರಿ. ಎಷ್ಟು ಪ್ರದರ್ಶನಿಯನ್ನು ನೋಡಿ ಪ್ರಭಾವಿತರಾಗುತ್ತಾರೋ ಅಷ್ಟು ಪ್ರೊಜೆಕ್ಟರ್ ನಿ೦ದ ಪ್ರಭಾವಿತರಾಗುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-
1. ಹಳೆಯ ಪ್ರಪಂಚದ ವಿನಾಶವಾಗುವ ಮೊದಲು ತಮ್ಮ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ. ನೆನಪಿನಲ್ಲಿದ್ದು ಸತೋಪ್ರಧಾನರಾಗಬೇಕಾಗಿದೆ.
2. ಸದಾ ಇದೇ ಖುಷಿಯಿರಲಿ- ನಮಗೆ ಓದಿಸುವವರು ಸ್ವಯಂ ಸರ್ವ ಶ್ರೇಷ್ಠ ತಂದೆಯಾಗಿದ್ದಾರೆ. ವಿದ್ಯೆಯನ್ನು ಚೆನ್ನಾಗಿ ಓದಬೇಕು ಮತ್ತು ಓದಿಸಬೇಕಾಗಿದೆ. ಕೇಳಿರುವುದನ್ನು ವಿಚಾರ ಸಾಗರ ಮ೦ಥನ ಮಾಡಬೇಕಾಗಿದೆ.
ವರದಾನ:-
ನಾನು ಎನ್ನುವ ಹೊರೆಯನ್ನು ಸಮಾಪ್ತಿಗೊಳಿಸಿ ಪ್ರತ್ಯಕ್ಷ ಫಲದ ಅನುಭವವನ್ನು ಮಾಡುವಂತಹ ಬಾಲಕನಿಂದ ಮಾಲೀಕ ಭವ.
ಯಾವಾಗ ಯಾವುದೇ ಪ್ರಕಾರದ ನಾನು ಎನ್ನುವುದು ಬರುತ್ತದೆಯೋ ಆಗ ಹೊರೆಯು ತಲೆಯ ಮೇಲೆ ಬಂದು ಬಿಡುತ್ತದೆ.ಆದರೆ ಯಾವಾಗ ತಂದೆಯು ಆಫರ್ ಮಾಡುತ್ತಿದ್ದಾರೆ- ಎಲ್ಲಾ ಹೊರೆಯನ್ನು ನನಗೆ ಕೊಟ್ಟು ಬಿಡಿ, ತಾವು ಕೇವಲ ನರ್ತಿಸುತ್ತಿರಿ,ಹಾರಿರಿ. ನಂತರ ಇದೇಕೆ ಎಂಬ ಪ್ರಶ್ನೆಯಲ್ಲಿ- ಸರ್ವೀಸ್ ಹೇಗಾಗುತ್ತದೆ,ಭಾಷಣವನ್ನು ಹೇಗೆ ಮಾಡುವುದು, ತಾವು ಕೇವಲ ನಿಮಿತ್ತರೆಂದು ತಿಳಿದುಕೊಂಡು ಪವರ್ ಹೌಸ್ ಜೊತೆಯಲ್ಲಿ ಸಂಬ೦ಧವನ್ನು ಜೋಡಿಸಿ ಕುಳಿತು ಬಿಡಿ . ಹೃದಯ ವಿಧಿeರ್ಣರಾಗುವುದಿಲ್ಲವೆಂದರೆ ಬಾಪ್ ದಾದಾರವರೇ ಎಲ್ಲವನ್ನೂ ಮಾಡಿಸಿ ಬಿಡುತ್ತಾರೆ, ಬಾಲಕನಿಂದ ಮಾಲೀಕನೆಂದು ತಿಳಿದುಕೊಂಡು ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರೆಂದರೆ, ಪ್ರತ್ಯಕ್ಷ ಫಲದ ಅನುಭೂತಿಯನ್ನು ಮಾಡುತ್ತಿರುತ್ತೀರಿ.
ಸ್ಲೋಗನ್ :-
ಜ್ಞಾನದಾನದ ಜೊತೆ ಜೊತೆಗೆ ಗುಣದಾನವನ್ನು ಮಾಡುತ್ತೀರೆಂದರೆ ಸಫಲತೆಯು ಸಿಗುತ್ತಿರುತ್ತದೆ.